ಮಾಜಿ ಸಚಿವರ ರಾಷ್ಟ್ರಧ್ವಜ ಹೇಳಿಕೆ ವಿರುದ್ಧ ಆಪ್ ಕಹಳೆ!

ಸುದ್ದಿಲೈವ್.ಕಾಂ/ಶಿವಮೊಗ್ಗ
ಭಗವಾಧ್ವಜ ಹಾಗೂ ರಾಷ್ಟ್ರ ಧ್ವಜ ಸಂಬಂಧ ಈಶ್ವರಪ್ಪ ಹೇಳಿಕೆ ವಿಚಾರದ ವಿರುದ್ದ ಶಿವಮೊಗ್ಗದಲ್ಲಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿತು.
ಆಪ್ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ. ನಡೆದಿದ್ದು, ಶಿವಮೊಗ್ಗದ ಬಸ್ ವೃತ್ತದಿಂದ ಗೋಪಿ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆದಿದೆ.
ರಾಷ್ಟ್ರಧ್ವಜಕ್ಕೆ ಮಾಜಿ ಸಚಿವ ಈಶ್ವರಪ್ಪ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಲಾಗಿದೆ.ಈಶ್ವರಪ್ಪ ಬಂಧಿಸುವಂತೆ ಆಪ್ ಕಾರ್ಯಕರ್ತರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ರ್ಯಾಲಿಯಲ್ಲಿ ಮುಖಂಡರಾದ ಭಾಸ್ಕರ್ ರಾವ್, ಮನೋಹರ್ ಗೌಡ ಸೇರಿದಂತೆ ಕಾರ್ಯಕರ್ತರು ಭಾಗಿದ್ದರು.
ಶಿವಮೊಗ್ಗದಲ್ಲಿ ಆಪ್ ಮುಖಂಡ ಭಾಸ್ಕರ್ ರಾವ್ ಹೇಳಿಕೆ.
ಈ ಸಂದರ್ಭದಲ್ಲಿ ಮಾತನಾಡಿದ ಆಪ್ ಮುಖಂಡ ಭಾಸ್ಕರ್ ರಾವ್, ಮಾಜಿ ಸಚಿವ ಈಶ್ವರಪ್ಪ ಅವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ.ಸರ್ಕಾರದ ಭಾಗವಾಗಿರುವವರು ಹೀಗೆ ಮಾತನಾಡುವುದು ಸರಿಯಲ್ಲ. ಈಗಾಗಲೇ ಈಶ್ವರಪ್ಪ ವಿರುದ್ಧ ಸಂತೋಷ್ ಪಾಟೀಲ್ ವಿಚಾರದಲ್ಲಿ ಕೇಸ್ ದಾಖಲಾಗಿದೆ ಎಂದರು.
ಪ್ರಕರಣದಲ್ಲಿ ಐಪಿಸಿ 306 ದಾಖಲಾಗಿದ್ದರೂ ಈಶ್ವರಪ್ಪ ಅವರನ್ನು ಬಂಧಿಸಿಲ್ಲ. ಅದೇ ಕೇಸ್ ನಲ್ಲಿ ಜನಸಾಮನ್ಯ ಇದ್ದೀದ್ದರೇ ಬಂಧನ ಮಾಡ್ತಿದ್ರು.ಸಚಿವರಾಗಿದ್ದವರು, ಶಾಸಕರು ಅನ್ನೋ ಕಾರಣಕ್ಕೆ ಬಂಧನ ಮಾಡಿಲ್ಲ. ತಕ್ಷಣವೇ ಈಶ್ವರಪ್ಪ ಅವರನ್ನು ಬಂಧನ ಮಾಡ್ಬೇಕು.ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಸಂಬಂಧ ದೂರು ನೀಡ್ತೇವೆ ಎಂದು ಭಾಸ್ಕರ್ ರಾವ್ ತಿಳಿಸಿದರು.
