ಆತ್ಮರಕ್ಷಣೆಗಾಗಿ ಫೈರಿಂಗ್-ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀ ಪ್ರಸಾದ್

ಸುದ್ದಿಲೈವ್.ಕಾಂ/ಶಿವಮೊಗ್ಗ
ರೌಡಿ ಶೀಟರ್ ಹರ್ಷದ್ ಮೇಲೆ ಫೈರಿಂಗ್ ಮಾಡಿರುವುದು ಆತ್ಮ ರಕ್ಷಣೆಗಾಗಿ ಎಂದು ಜಿಲ್ಲಾರಕ್ಷಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಬುದ್ಧನಗರದ ನಿವಾಸಿ ಹರ್ಷದ್ @ ಜಾಮೂನ್( 30), ಮೇಲೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾರಣಾಂತಿಕ ಹಲ್ಲೆ, ಮನೆಗಳ್ಳತನ ಮತ್ತು ದರೋಡೆ ಪ್ರಕರಣಗಳು ಸೇರಿದಂತೆ ಒಟ್ಟು 06 ಪ್ರಕರಣಗಳುದಾಖಲಾಗಿರುತ್ತವೆ ಎಂದರು.
ಇವುಗಳಲ್ಲಿ ಕೋಟೆ ಪೊಲೀಸ್ ಠಾಣೆಯ ಮಾರಣಾಂತಿಕ ಹಲ್ಲೆ ಪ್ರಕರಣವೊಂದರಲ್ಲಿ ಘನ ನ್ಯಾಯಾಲಯವು ಆರೋಪಿತನಿಗೆ 10 ವರ್ಷಗಳ ಕಾಲ ಕಾರಾವಾಸ ಶಿಕ್ಷೆ ವಿಧಿಸಿದೆ. ನಂತರ ಸರ್ವೋಚ್ಚ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಈತ ಹೊರಗೆ ಬಂದಿದ್ದಾನೆ. ಈ ಜಾಮೀನಿನಮೇಲೆ ಹೊರಗೆ ಬಂದ ನಂತರವೂ ಕೂಡ ಈತನು ಅಪರಾಧ ಕೃತ್ಯಗಳನ್ನು ಮಾಡುತ್ತಿದ್ದರಿಂದ ಆತನ ವಿರುದ್ಧ ಸಾರ್ವಜನಿಕ ದೂರುಗಳು ಬಂದಿದ್ದವು ಎಂದರು.
ಮೊನ್ನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಹಣ ನೀಡುವಂತೆ ಚಾಕು ತೋರಿಸಿ ಬೆದರಿಕೆ ಹಾಕಿದ್ದು, ಈ ಬಗ್ಗೆ ಪ್ರಕರಣ ದಾಖಲಿಕೊಂಡು ಪಿಐ ತುಂಗಾನಗರ ಮತ್ತು ಸಿಬ್ಬಂಧಿಗಳ ತಂಡವು ಪ್ರಕರಣದ ತನಿಖೆ ಕೈಗೊಂಡಿರುತ್ತಾರೆ ಎಂದರು
ಕಾರ್ಯಾಚರಣೆಯ ಸಮಯದಲ್ಲಿ ಆರೋಪಿತನು ಪೊಲೀಸ್ ಸಿಬ್ಬಂಧಿಯವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ರಕ್ತ ಗಾಯ ಪಡಿಸಿರುತ್ತಾನೆ. ಆಗ ಮಂಜುನಾಥ್. ಪಿ.ಐ ತುಂಗಾನಗರ ಪೊಲೀಸ್ ಠಾಣೆ ರವರು ತಮ್ಮ ಮತ್ತು ಸಿಬ್ಬಂಧಿಗಳ ಆತ್ಮ ರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ಸೇವಾ ಪಿಸ್ತುಲ್ ನಿಂದ ಗುಂಡು ಹಾರಿಸಿರುತ್ತಾರೆ. ನಂತರ ಗಾಯಗೊಂಡ ಆರೋಪಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ ಎಂದು ತಿಳಿಸಿದರು.
