ಕ್ರೈಂ

ಮಗನ ವಿರುದ್ಧ ತಾಯಿಯ ದೂರು!

IMG_20220603_113733_1

ಸುದ್ದಿಲೈವ್.ಕಾಂ/ಶಿವಮೊಗ್ಗ

ಕುಡಿತದ ದಾಸನಾದ ಮಗ ತಾಯಿಯನ್ನೇ ಥಳಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ

ಬಸವಗಂಗೂರಿನಲ್ಲಿ ವಾಸವಾಗಿರುವ ಮೌಸೀನ ಬಾನು ಎಂಬುವರ ಮಗ ಫೈಯಾಜ್ ಎಂಬಾತ ಮೊದಲಿನಿಂದಲೂ ಕುಡಿಯುವ ಚಟಕ್ಕೆ ಬಿದ್ದು ಮದುವೆಯಾದರೂ ಸರಿಯಾಗಿ ಬಾಳ್ವೆ ನಡೆಸದ ಹಿನ್ಬಲೆಯಲ್ಲಿ ಆಕೆ ವಾಪಾಸ್ ತವರು ಮನೆಗೆ ಹೋಗಿದ್ದಾರೆ.

ಅತಿಯಾದ ಕುಡಿತದಿಂದ ಮನೆಯ ವಸ್ತುಗಳನ್ನ ಫೈಯಾಜ್ ಹಾನಿ ಮಾಡುತ್ತಿದ್ದು ತಂದೆ ತಾಯಿ ಒಡಹುಟ್ಟಿದವರೆಂದು ನೋಡದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು. ಮೊನ್ಬೆ ರಾತ್ರಿ ಕುಡಿದುಕೊಂಡು ಬಂದ ಫೈಯಾಜ್ ಟಿವಿಯನ್ನ ಒಡೆದು ಹಾಕಿದ್ದಾನೆ.

ತಡೆಯಲು ಹೋದ ತಾಯಿಯನ್ನೇ ಒದ್ದು ಥಳಿಸಿದ್ದಾನೆ. ನಂತರ ತಾಯಿ ಕೂಗಿಕೊಂಡ ಪರಿಣಾಮ ಅಕ್ಕಪಕ್ಕದವರು ಬಂದು ತಾಯಿಯನ್ನ ಮಗನಿಂದ ರಕ್ಷಿಸಿದ್ದಾರೆ. ಕೋಪದಲ್ಲಿ ಫೈಯಾಜ್ ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಕುರಿತು ಮೌಸೀನಾ ಭಾನು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button