ಕೇಸ್ ವಾಪಾಸ್ ಪಡೆಯದಿದ್ದರೆ ಖಾಸಗಿ ವಿಡಿಯೋ ವೈರಲ್-ಪತಿಯ ಬೆದರಿಕೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ವಿವಾಹ ವಿಚ್ಛೇದನೆ ಪ್ರಕರಣವನ್ನ ವಾಪಾಸ್ ಪಡೆಯದಿದ್ದರೆ ಖಾಸಗಿ ವಿಡಿಯೋವನ್ನ ವೈರಲ್ ಮಾಡುವುದಾಗಿ ವಿಚ್ಛೇದನ ಬಯಸಿದ ಪತಿಯೇ ಪತ್ನಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಆರ್ ಎಂ ಎಲ್ ನಿವಾಸಿಯ ಮಹಿಳೆಯನ್ನ 1993 ರಲ್ಲಿ ಸೈಯದ್ ಅಜ್ಗರ್ ಎಂಬುವರು ಮದುವೆಯಾಗಿದ್ದು ನಂತರದ ದಿನಗಳಲ್ಲಿ ಸಂಸಾರದಲ್ಲಿ ಸರಿಬಾರದೆ ಇದ್ದ ಹಿನ್ನಲೆಯಲ್ಲಿ ಇಬ್ಬರು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ.
ಅಲ್ಲದೇ ಜೀವನಾಂಶ ಕೋರಿ ಮಹಿಳೆಯು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಮೇ.29 ರಂದು ಮಂಜುನಾಥ ಬಡಾವಣೆಯಲ್ಲಿ ನಡೆದುಕೊಂಡು ಹೋಗುವಾಗ ಸೈಯ್ಯದ್ ಅಜ್ಗರ್, ಸೈಯ್ಯದ್ ಸಲಾಲುದ್ದೀನ್ , ಸೈಯ್ಯದ್ ಖಮ್ರುದ್ದೀನ್, ಸೈಯ್ಯದ್ ನಿಜಾಮುದ್ದೀನ್ ಮಹಿಳೆಯನ್ನ ಅಡ್ಡಕಟ್ಟಿದ್ದಾರೆ.
ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನ ವಾಪಾಸ್ ಪಡೆಯಬೇಕು. ಇಲ್ಲವಾದಲ್ಲಿ ಖಸಾಗಿ ವಿಡಿಯೋಗಳನ್ನ ಎಲ್ಲರ ಮೊಬೈಲ್ ನಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾರೆ. ಸೈಯ್ಯದ್ ಅಜ್ಗರ್ ಮತ್ತು ಸೈಯ್ಯದ್ ಸಲಾಲುದ್ದೀನ್ ಮಹಿಳೆಯ ಕೈ ಹಿಡಿದು ಎಳೆದಾಡಿದ್ದಾರೆ.
ಮಹಿಳೆಯು ಬಿದ್ದಾಗ ಕೇಸ್ ವಾಪಾಸ್ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಬೆರಿಸಿದ್ದಾರೆ.ಆರೋಪಿತರು ಕಲ್ಲಿನಿಂದ ಹಲ್ಲೆ ನಡೆಸಲು ಮುಂದಾಗಿದ್ದು ಮಹಿಳೆಯ ತಪ್ಪಿಸಿಕೊಂಡಿದ್ದಾರೆ. ಈ ನಾಲ್ವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
