ಕ್ರೈಂ
ಮಹಿಳೆಯ ಮೊಬೈಲ್ ಗೆ ಅಶ್ಲೀಲ ವಿಡಿಯೋ ರವನೆ-ಅಪರಿಚಿತರ ಪತ್ತೆಗಾಗಿ ಭರ್ಜರಿ ಬಲೆ ಬೀಸಿದ ಖಾಕಿಪಡೆ

ಸುದ್ದಿಲೈವ್.ಕಾಂ/ರಿಪ್ಪನ್ಪೇಟೆ
ಮಹಿಳೆಯೋರ್ವರ ಮೊಬೈಲ್ ಗೆ ಅಶ್ಲೀಲ ವಿಡಿಯೋ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಅಪರಿಚಿತರ ವಿರುದ್ಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದೆ.
ಗವಟೂರು ಗ್ರಾಮದ ನಿವಾಸಿಯಾಗಿರುವ ಮಹಿಳೆಯ ಮೊಬೈಲ್ ಗೆ ಮೇ.10 ರಂದು ಅಶ್ಲೀಲ ವಿಡಿಯೋಗಳನ್ನ ಎರಡು ಅಪರಿಚಿತ ನಂಬರ್ ನಿಂದ ರವಾನಿಸಿ ಮೇಲಿಂದ ಮೇಲೆ ಕರೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಅರ್ಜಿಯನ್ನೂ ಮಹಿಳೆ ನೀಡಿದ್ದರು.
ಇದರ ಬೆನ್ನು ಹತ್ತಿದ ಪೊಲೀಸರು ಎರಡು ಅಪರಿಚಿತ ಮೊಬೈಲ್ ಗಳನ್ನ ಪತ್ತೆ ಹಚ್ಚಿದ್ದಾರೆ. ಎರಡು ಅಪರಿಚಿತ ನಂಬರ್ ಗಳು ಉತ್ತರ ಕನ್ನಡದ ನಿವಾಸಿಗಳ ಹೆಸರಿನಲ್ಲಿದ್ದು, ಆದರೆ ಇವರುಗಳು ಈ ನಂಬರ್ ಗಳನ್ನ ಪತ್ತೆಯಾಗಿರುವ ಹೆಸರಿನ ಗ್ರಾಹಕರು ಬಳಸದೆ ಇರುವುದು ಸಹ ಬೆಳಕಿಗೆ ಬಂದಿದೆ.
ಈ ಬಗ್ಗೆ ಹೆಚ್ಚಿನ ತನಿಖೆಗೆ ಅನುಮತಿ ಕೋರಿ ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಪೊಲೀಸರ ತಂಡ ಈಗಾಗಲೇ ಉತ್ತರ ಕನ್ನಡದಲ್ಲಿ ಮೊಕ್ಕಂ ಹೂಡಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
