
ಸುದ್ದಿಲೈವ್.ಕಾಂ/ಶಿವಮೊಗ್ಗ
ರಾಗಿಗುಡ್ಡದಲ್ಲಿ ಇಎಸ್ ಐ ಆಸ್ಪತ್ರೆ ನಿರ್ಮಾಣಕ್ಕೆ ನೀಡಲಾದ ಕಂಟ್ರೋಲ್ಡ್ ಬ್ಲಾಸ್ಟಿಂಗ್ ಗೆ ಅನುಮತಿಯನ್ನ ನೀಡಲಾಗಿತ್ತು. ಆದರೆ ಈ ಬಗ್ಗೆ ಮತ್ತೆ ಅನುಮತಿಗೆ ಪರಿಶೀಲಿಸುವುದಾಗಿ ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್ ಹೊನ್ನಳ್ಳಿ ಸ್ಪಷ್ಟಪಡಿಸಿದ್ದಾರೆ.
ನಿನ್ನೆಯ ದಿನ ಇಎಸ್ ಐ ಆಸ್ಪತ್ರೆಯ ನಿರ್ಮಾಣಕ್ಕೆ ಬಂಡೆ ಬ್ಲಾಸ್ಟ್ ಗೆ ಜಿಲ್ಲಾಧಿಕಾರಿ ಕಚೇರಿಯಿಂದ ನೀಡಿದ ಅನುಮತಿ ನೀಡಲಾಗಿದೆ. 15 ದಿನಗಳ ಹಿಂದೆ ಅನುಮತಿ ನೀಡಲಾಗಿತ್ತು. ಯಾವುದೇ ಅನುಮತಿಯನ್ನ ದಿಡೀರನೇ ನೀಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಅಲ್ಲಿನ ನಿವಾಸಿಗಳು ಬಂದು ಮನವಿ ಕೊಟ್ಟಿರುವುದು ಹೌದು ಎಂದು ಸ್ಪಷ್ಟಪಡಿಸಿರುವ ಎಡಿಸಿ ಜನರ ಮನವಿಯನ್ನ ಪರಿಗಣಿಸಲಾಗುವುದು. ಮತ್ತೆ ಬ್ಲಾಸ್ಟ್ ಗೆ ಅನುಮತಿಗೆ ಪರಿಶೀಲಿಸಲಾಗುವುದು ಎಂದು ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಸ್ಪಷ್ಟಗೊಳ್ಳದ ಕಂಪನದ ತೀವ್ರತೆ
ಅಪರ ಜಿಲ್ಲಾಧಿಕಾರಿಗಳ ಸ್ಪಷ್ಟನೆ ಹಿಂದೆ ಕೆಲ ಮನೆಗಳ ಬಿರುಕು ಬಿಟ್ಟಿವೆ ಎಂದು ಸಾರ್ವಜನಿಕರು ಆರೋಪಿಸಿದ್ದು ಇಲ್ಲಿ ಕಂಪನಗಳು ಎಷ್ಟಿತ್ತು ಎಂದು ಗಣಿಮತ್ತು ಭೂ ವಿಜ್ಞಾನ ಇಲಾಖೆ ಸ್ಪಷ್ಟಪಡಿಸಿಲ್ಲ. ಹಲವು ಪ್ರಯತ್ನಗಳ ನಡುವೆ ಇಲಾಖೆ ಅಧಿಕಾರಿಗಳು ಮಾತ್ರ ಕಂಪನದ ಕುರಿತು ಸ್ಪಷ್ಟನೆ ನೀಡದೆ ಇರುವುದು ಕುತೂಹಲಕ್ಕೆ ಕಾರಣವಾಗಿದೆ.
