ಕ್ರೈಂ

ಬಸ್ ನಿಂದ ಇಳಿಯುವಾಗ ಕೆಳಗೆ ಬಿದ್ದು ವೃದ್ಧ ಸಾವು

_

ಸುದ್ದಿಲೈವ್.ಕಾಂ/ಶಿಕಾರಿಪುರ

ಬಸ್ ನಿಂದ ಇಳಿಯುವಾಗ ಬಸ್ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಿಸಿದ ಪರಿಣಾಮ ಪ್ರಯಾಣಿಕನ ತಲೆ ಮೇಲೆ ಬಸ್ ನ ಚಕ್ರ ಹರಿದಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಕಾರಿಪುರದ ಎಸ್ ಎಸ್ ರಸ್ತೆಯಲ್ಲಿ ನಡೆದಿದೆ.

ಮೊನ್ನೆ ರಾತ್ರಿ ಶಿರಾಳಕೊಪ್ಪದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್ ಎಸ್ ಎಸ್ ರಸ್ತೆಯ ಬಳಿ ಬಂದು ನಿಂತಾಗ ಬೂದ್ಯಪ್ಪ ಎಂಬ 60 ವರ್ಷದ ವೃದ್ಧ ಬಸ್ ನ ಮುಂಭಾಗದ ಬಾಗಿಲಿನಿಂದ ಇಳಿಯುವ ವೇಳೆ ಬಸ್ ಚಾಲಕ ಮುಂದಕ್ಕೆ ಚಲಿಸಿದ ಪರಿಣಾಮ ಬೂದ್ಯಪ್ಪ ಕೆಳಗೆ ಬಿದ್ದಿದ್ದಾರೆ.

ಅವರ ತಲೆಯ ಮೇಲೆ ಮುಂದಿನ ಚಕ್ರ ಹರಿದಿದೆ. ರಸ್ತೆಯ ಮೇಲೆ ವೃದ್ಧನ ಮಿದುಳು ಹೊರಗೆ ಬಂದಿದೆ. ಸಾರ್ವಜನಿಕರು ಮತ್ತು ಅಲ್ಲೇ ಇದ್ದ ವೀರೇಂದ್ರ ಪಾಟೀಲ್ ಮತ್ತು ಕರಿಬಸಯ್ಯನವರು ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಶವಗಾರಿಕೆಗೆ ಸಾಗಿಸಿದ್ದಾರೆ.

ಬೂದ್ಯಪ್ಪ ಕಪ್ಪನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ಈ ಘಟನೆ ವಿರುದ್ಧ ಶಿಕಾರಿಪುರದ ಚನ್ನಕೇಶವ ನಗರದ ನಿವಾಸಿ ಕರಿಬಸಪ್ಪ ಬಸ್ ಚಾಲಕನ ನಿರ್ಲಕ್ಷ ಮತ್ತು ಬೇಜವಬ್ದಾರಿ ವಿರುದ್ಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button