ಬಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಯರ್ ಬಾಟಲಿನಿಂದ ಹಲ್ಲೆ!

ಸುದ್ದಿಲೈವ್.ಕಾಂ/ಶಿವಮೊಗ್ಗ
ಮೊನ್ನೆ ಕಿಟ್ಟದಳ್ಳಿಯ ಸಂಗಮ್ ಬಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ಆಗಿದೆ. ಕಿಟ್ಟದಳ್ಳಿಯ ನಿವಾಸಿ ಮೌನೇಶಪ್ಪ ಎಂಬುವರ ಮೇಲೆ ಎಲೆ ಶಿವು, ಉಡುಗಣಿ ಲೋಹಿತ್,ಪಾರಿವಾಳ ಸೋಮು ಎಂಬ ಮೂವರು ಮುಗಿಬಿದ್ದು ಬಿಯರ್ ಬಾಟಲಿನಿಂದ ಹಲ್ಲೆ ನಡೆಸಿದ್ದಾರೆ.
ಕಿಟ್ಟದಳ್ಳಿ ಸಂಗಮ್ ಬಾರ್ ನಲ್ಲಿ ಮೈಕೈ ನೋವು ಮತ್ತು ಸುಸ್ತು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೌನೇಶಪ್ಪ ಎಂಬುವರು ಟೇಬಲ್ ಮೇಲೆ ಕುಳಿತಿದ್ದಾಗ ಪಕ್ಕದ ಟೇಬಲ್ ಗೆ ತಿರುಗಿ ನೋಡಿದ್ದಾರೆ.
ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಎಲೆ ಶಿವು,ಉಡುಗಣಿ ಲೋಹಿತ್, ಪಾರಿವಾಳ ಸೋಮು ಎಂಬ ಮೂವರು ಕುಳಿತಿದ್ದು, ಇದರಲ್ಲಿ ಎಲೆ ಶಿವು ಕಿರಿಕ್ ಶುರು ಮಾಡಿದ್ದಾನೆ. ಅವ್ಯಾಚ್ಯ ಶಬ್ದಗಳಿಂದ ಬೈದ ಶಿವು ಏನ್ ಗುರಾಯಿಸ್ತ್ಯಾ ಎಂದು ಗದರಿಯಿಸಿದ್ದಾನೆ.
ಇಷ್ಟರಲ್ಲೇ ಮೌನೇಶಪ್ಪರಿಗೆ ಪಿಕ್ಚರ್ ಬಿಟ್ಟುಹೋಗಿದೆ. ಏನಿಲ್ಲ ಅಣ್ಣ ನಾನು ಸುಮ್ಮನೆ ನೋಡಿದೆ ಎಂದು ಸಮ್ಜಾಯಿಷಿ ನೀಡಿ ಯಾಕೋ ಸರಿ ಬರೊಲ್ಲವೆಂದು ಕೌಂಟರ್ ಬಳಿ ಎದ್ದು ಹೋಗಿದ್ದಾರೆ. ಅಲ್ಲಿಗೂ ಬಿಡದಎಲೆ ಶಿವು ಅಂಡ್ ಗ್ಯಾಂಗ್ ನಾನು ಯಾರು ಗೊತ್ತಾನೋ ಕೊಲೆ ಮಾಡಿ ಜೈಲಿಗೆ ಹೋಗಿ ಬಂದವನು ಎಂದು ಗದರಿದ್ದಾನೆ.
ಮುಷ್ಟಿಯಿಂದ ಮೌನೇಶಪ್ಪನಿಗೆ ಹೊಡೆದಿದ್ದಾನೆ. ನಂತರ ಬಂದ ಉಡುಗಣಿ ಲೋಕೇಶ್ ಬಿಯರ್ಬಾಟಲಿಯಿಂದ ಮೌನೇಶಪ್ಪನ ತಲೆಗೆ ಹೊಡೆದಿದ್ದಾನೆ. ಪಾರಿವಾಳ ಶಿವು ಸಹ ನಮಗೆ ಗುರಾಯಿಸುತ್ತಾನೆ ಎಂದರೆ ಸುಮ್ಮನೆ ಬಿಡಬಾರದು ಎಂದು ಕಾಲಿನಿಂದ ಒದ್ದಿದ್ದಾನೆ.
ನಂತರ ಅಕ್ಕಪಕ್ಕದ ಜನ ಜಗಳ ಬಿಡಿಸಿ ಮೌನೇಶಪ್ಪನನ್ನ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ಹೆಚ್ಚಿನಚಿಕಿತ್ಸೆಗಾಗಿ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
