ಸುದ್ದಿ

ರಾಗಿಗುಡ್ಡದಲ್ಲಿ ನಡೆದಿದ್ದು ಕಂಟ್ರೋಲ್ಡ್ ಬ್ಲಾಸ್ಟಾ ಅಥವಾ ಒತ್ತಡದ ಬ್ಲಾಸ್ಟಾ?

ಸುದ್ದಿಲೈವ್.ಕಾಂ/ಶಿವಮೊಗ್ಗ

ಹುಣಸೋಡು ಬ್ಲಾಸ್ಟ್ ಇನ್ನೂ ಮನದಾಳದಲ್ಲಿ ಹಚ್ಚಹಸಿರು ಇರುವಾಗಲೇ ನಿನ್ನೆ ಸಂಜೆಯ ಮೇಲೆ ರಾಗಿಗುಡ್ಡದಲ್ಲಿ ಸ್ಪೋಟದ ಕಂಪನ ಕೇಳಿಬಂದಿದೆ. ಈ ಸ್ಪೋಟಕ್ಕೆ ಅನುಮತಿ ನೀಡಲಾಗಿದೆಯೋ ಅಥವಾ ಒತ್ತಡದಿಂದ ಸ್ಪೋಟಿಸಲಾಗಿದೆಯೋ ಎಂಬ ಅನುಮಾನ ಮೂಡಿದೆ. ಒಟ್ಟಿನಲ್ಲಿ ಮತ್ತೊಮ್ಮೆ ಜನ ಭಯಭೀತಿಗೆ ಒಳಗಾಗಿದ್ದಾರೆ.

ಇಎಸ್ಐ ಆಸ್ಪತ್ರೆ ಕಟ್ಟಲು ಇಲ್ಲಿನ ಮಣ್ಣನ್ನ ಬೇರೆಡೆ ಸಾಗಿಸಲಾಗಿತ್ತು. ಆಗಲೂ ಸ್ಥಳೀಯರು ವಿರೋಧಿಸಿದರು. ಈ ವಿರೋಧವನ್ನ ಧಿಕ್ಕರಿಸಲಾಗಿತ್ತು. ಈ ಬ್ಲಾಸ್ಟ್ ವಿಚಾರದಲ್ಲಿ ಸ್ಥಳೀಯರ ಒಟ್ಟಾರೆ ಅಭಿಪ್ರಾಯವನ್ನ ಬದಿಗಿಟ್ಟು ಸ್ಪೋಟಿಸಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಎಸ್ಐ ಕಟ್ಟಡಕ್ಕೆ ಅಲ್ಲಿನ ಬಂಡೆಯೊಂದು ಅಡ್ಡ ಬರುತ್ತಿದ್ದು ಈ ಬಂಡೆಯನ್ನ ಸ್ಪೋಟಿಸಿ ಕಟ್ಟಡ ನಿರ್ಮಾಣ ಕಾರ್ಯ ಮುಂದುವರೆಯಬೇಕಿತ್ತು. ಇದಕ್ಕೆ ಕಳೆದ ಮೂರು ನಾಲ್ಕು ತಿಂಗಳಿಂದ ಜಿಲ್ಲಾಡಳಿತದ ಅನುಮತಿಗೆ ಕಾಯಲಾಗಿತ್ತು. ನಂತರ ಸ್ಥಳೀಯರ ಅನುಮತಿ ಪಡೆದು ಮುಂದು ವರೆಯುವಂತೆ ಯೋಚಿಸಲಾಗಿತ್ತು.

ಆದರೆ ನಿನ್ನೆ ಏಕಾಏಕಿ ಕಂಟ್ರೋಲ್ಡ್ ಬ್ಲಾಸ್ಟ್ ಗೆ ಅಲ್ಲಿನ ಗುತ್ತಿಗೆದಾರ ಅನುಮತಿ ಪಡೆದು ಬ್ಲಾಸ್ಟ್ ಮಾಡಿರುವ ಬಗ್ಗೆ ಮಾಹಿತಿ ಕೇಳಿ ಬಂದಿದೆ. ಆದರೆ ಈ ಕಂಟ್ರೋಲ್ಡ್ ಬ್ಲಾಸ್ಟ್ ಬಗ್ಗೆ ಜಿಲ್ಲಾಡಳಿತ ಇನ್ನೂ ಮಾಹಿತಿ ಸ್ಪಷ್ಟಪಡಿಸಿಲ್ಲ. ಹೀಗಾಗಿ ಕಂಟ್ರೋಲ್ಡ್ ಬ್ಲಾಸ್ಟ ಗೆ ಅನುಮತಿ ನೀಡಿದ್ದ ಅಥವಾ ಒತ್ತಡಕ್ಕೆ ಮಣಿದು ಸ್ಪೋಟಿಸಲಾಗಿರುವ ಬಗ್ಗೆ ಅನುಮಾನ ಬರುತ್ತಿದೆ.

ಈ ಅನುಮಾನದ ಒಪ್ಪಿಗೆಯಿಂದಾಗಿ 7ರಿಂದ 8 ಮನೆಗಳು ಬಿರುಕು ಬಿಟ್ಟಿವೆ ಎಂದು ಹೇಳಲಾಗುತ್ತಿದೆ. ಹಾನಿಗೊಳಗಾದ ಮನೆಗಳವರು  ಯಾರೂ ಪೊಲೀಸ್  ಠಾಣೆಗಳಿಗೆ ಹೋಗಿ ಎಫ್ಐಆರ್ ನೀಡಿಲ್ಲ. ಕಂಪನದ ತೀವ್ರತೆ ಬಗ್ಗೆಯಾಗಲಿ, ಎಷ್ಟು ಸ್ಪೋಟಕಗಳನ್ನ ಬಳಸಿ ಬ್ಲಾಸ್ಟ್ ಸಿಡಿಸಬೇಕಿತ್ತು ಎಂಬುದರ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸ್ಪಷ್ಟಪಡಿಸಬೇಕಿತ್ತು. ಆದರೆ ಇಲಾಖೆಯ ಅಧಿಕಾರಿಗಳು ಫೊನ್ ಸ್ವೀಕರಿಸಿ ಮಾಹಿತಿ ನೀಡುವ ಗೋಜಲಿಗೆ ಹೋಗುತ್ತಿಲ್ಲ.

ಇದರಿಂದಾಗಿ ಈ ಸ್ಪೋಟ ಮತ್ತೊಂದು ಹುಣಸೋಡು ಸ್ಪೋಟವೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆಯಾ‌ ಅಥವಾ ಆಮಿಷವೊಡ್ಡಿ ಸ್ಪೋಟಿಸಲಾಗಿದೆಯಾ ಎಂಬುದರ‌ ಬಗ್ಗೆ ಜಿಲ್ಲಾಡಳಿತ ಸ್ಪಷ್ಟಪಡಿಸಬೇಕಿದೆ.

IMG-20220602-WA0045 IMG-20220602-WA0236

ಅಕ್ಟೋಬರ್ ನಲ್ಲಿಯೇ ಮನವಿ ನೀಡಲಾಗಿತ್ತು

ರಾಗಿಗುಡ್ಡದ ಮ್ಯಾಕ್ಸ್ ಪೂರ್ಣೋದಯ ಲೇ‌ಔಟ್ ನ ನಿವಾಸಿಗಳು 2021 ಅಕ್ಟೋಬರ್ ನಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿ ಸ್ಪೋಟಕಗಳನ್ನ ಬಳಸಲಾಗುತ್ತಿದೆ ಎಂದು ಮನವಿ ಮಾಡಿದ್ದರೂ. ಆದರೂ ಬ್ಲಾಸ್ಟ್ ಗೆ ಅನುಮತಿ ನೀಡಿರುವ ಬಗ್ಗೆ ಅನುಮಾನಗಳು ಕಾಡ್ತಾ ಇವೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button