ಕ್ರೈಂ
ಜಂಕ್ಷನ್ ವೃತ್ತದಬಳಿ ಭೀಕರ ರಸ್ತೆ ಅಪಘಾತ-ಕುವೆಂಪು ವಿವಿಯ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿ ಸಾವು

ಸುದ್ದಿಲೈವ್.ಕಾಂ/ಭದ್ರಾವತಿ
ನಿನ್ನೆ ರಾತ್ರಿ ಭದ್ರಾವತಿಯ ಹುಣಸೇಕಟ್ಟೆ ಜಂಕ್ಷನ್ ಬಳಿ ರಸ್ತೆ ಅಪಘಾತವಾಗಿದ್ದು ಇಬ್ವರು ಕುವೆಂಪು ವಿಶ್ವವಿದ್ಯಾಲಯದ ಇಬ್ವರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿ 10-30 ರ ಸಮಯದಲ್ಲಿ ಕುವೆಂಪು ವಿದ್ಯಾರ್ಥಿಗಳಾದ ಉತ್ತಮ ಚಕ್ರವರ್ತಿ, ಮನೋಜ್ ಎಂಬ ಇಬ್ವರು ವಿದ್ಯಾರ್ಥಿಗಳು ಶಂಕರಘಟ್ಟದಿಂದ ಭದ್ರಾವತಿಗೆ ಹೋಗುವಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯಿಂದಾಗಿ ಇಬ್ಬರೂ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಉತ್ತಮ ಚಕ್ರವರ್ತಿ ಮತ್ತು ಮನೋಜ್ ಇಬ್ವರೂ ಸಹ ಎನ್ ಆರ್ ಪುರದ ನಿವಾಸಿಗಳಾಗಿದ್ದು, ಉತ್ತಮ್ ಎಂಸಿಎ ದ್ವಿತೀಯ ವರ್ಷದಲ್ಲಿ ಓದುತ್ತಿದ್ದರೆ, ಮನೋಜ್ ಎಂಕಾಂನಲ್ಲಿ ಓದುತ್ತಿದ್ದಾರೆ. ಪ್ರಕರಣ ಭದ್ರಾವತಿ ಗ್ರಾಮಾಂತರ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.
