ಪ್ರಧಾನಿ ಮೋದಿಯವರ 8 ವರ್ಷದ ಸಾಧನೆಯಲ್ಲಿ ಉತ್ತಮ ಕೆಲಸವಾಗಿದೆ-ಬಿವೈಆರ್
ಸುದ್ದಿಲೈವ್. ಕಾಂ/ಶಿವಮೊಗ್ಗ
ಪ್ರಧಾನಿ ಮೋದಿ ಸರ್ಕಾರ ಕೇಂದ್ರದಲ್ಲಿ ಬಂದು 8 ವರ್ಷಗಳ ಸಾಧನೆಯ ಜೊತೆಗೆ ಹಲವು ಗೊಂದಲಗಳ ವಿಷಯಗಳ ಬಗ್ಗೆಯೂ ಸಂಸದ ಬಿ.ವೈರಾಘವೇಂದ್ರ ತಮ್ಮದೇ ಆದ ದಾಟಿಯಲ್ಲಿ ಉತ್ತರಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರೋಗಗ್ರಸ್ಥ ಕೈಗಾರಿಕೆಗಳು ಹೊರೆಯಾಗಲಿದೆ. ಪಾಸಿಟಿವ್ ಗ್ರೋಥ್ ಕೈಗಾರಿಕೆಯನ್ನ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಭದ್ರಾವತಿಯ ಪಿಎಂಎಂ ಮತ್ತು ವಿಐಎಸ್ ಎಲ್ ವಿಚಾರದಲ್ಲಿ ಪ್ಲಾಂಟ್ ಗುತ್ತಿಗೆ ಕೊಡಲು ಕೇಳಲಾಗಿದೆ ಬಂಡವಾಳದಾರರನ್ಮ ಕರೆದುಕೊಂಡು ಬರಲಿದ್ದೇವೆ. ಎಂಪಿಎಂನ ಫಾರೆಸ್ಟ್ ಲ್ಯಾಂಡ್ 45 ವರ್ಷ ಮುಂದುವರೆದಿದೆ. ಜೂ.6 ಮತ್ತು 7 ರಂದು ಸಿಎಂ ಜೊತೆ ಮಾತನಾಡಲಿದ್ದೇನೆ.
ಯುವಕರರಿಗೆ ಉದ್ಯೋಗ ಸೃಷ್ಠಿಯಲ್ಲಿ ವಿಫಲವಾಗುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಮೂಲಭೂತ ಸೌಕರ್ಯಗಳ ಅಡಿಯಲ್ಲಿ ಉದ್ಯೋಗ ಸೃಷ್ಠಿಯಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಡಿಸೆಂಬರ್ ವರೆಗೆ ಸರಿಯಾದ ಚಿತ್ರಣ ದೊರೆಯಲಿದೆ. ಗ್ಯಾಸ್ ಸಬ್ಸಿಡಿ ದೊರೆಯುತ್ತಿಲ್ಲವೆಂಬ ಮಾತಿಗೆ ನೇರವಾಗಿ ಉತ್ತರ ಕೊಡದ ಎಂಪಿ ಉಜ್ವಲಕ್ಕೆ ಮಾತ್ರ ಸಬ್ಸಿಡಿ ನೀಡಲಾಗುತ್ತದೆ.
ಕೃಷಿ ಕಾಯ್ದೆಯನ್ನ ಹಿಂಪಡೆಯುವ ಮೂಲಕ ಜನರ ತೀರ್ಮಾನಕ್ಕೆ ಬಿಡಲಾಗಿದೆ ಎಂದರು. ವಿಪಕ್ಷಗಳು ರಾಜ್ಯ ಸರ್ಕಾರವನ್ನ ಕೆಳಗಿಳಿಸಲು ಭ್ರಷ್ಠಾಚಾರದ ಆರೋಪ ಮಾಡಲಾಗುತ್ತಿದೆ. ಅಡಿಕೆ ವಿಚಾರದಲ್ಲಿ ಎಚ್ಚರ ಇರಬೇಕು. ಲಾಭಿ ಮತ್ತು ಲಾಭಿಯ ವಿರೋಧಗಳ ನಡುವೆ ಎಚ್ಚರಿಕೆಯಿಂದ ಸಾಗಬೇಕುದೆ. ಹಾಗಾಗಿ ಅಡಿಕೆ ವಿಚಾರದಲ್ಲಿ ನಿಧಾನವಾಗಿ ಸಾಗುತ್ತಿದ್ದೇವೆ ಎಂದರು.
ನನ್ನ ಕ್ಷೇತ್ರದಲ್ಲಿ ಇನ್ಫ್ರಾಸ್ಟ್ರಕ್ಚರ್ ಗೆ ಹಣ ಹರಿಸಲು ಪ್ರಧಾನಿ ಮೋದಿ ಸರಳ ಮಾಡಿದ್ದಾರೆ. ದುರ್ಬಳಕೆಮಾತೇ ಇಲ್ಲ. ಏಕೆಂದರೆ ಹೊಳೆಹೊನ್ನೂರಿನಲ್ಲಿ ಆಗ್ತಾ ಇರುವ ಬ್ರಿಡ್ಜ್ ಪಾಲಿಕೆ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಹೇಗೆ ಎನ್ ಹೆಚ್ ಯೋಜನೆಯ ಅಡಿ ಹಣ ವಿನಿಯೋಗಿಸಲು ಸಾಧ್ಯ? ಈ ಆಕ್ಷೇಪಣೆಯನ್ನ ಆಕ್ಷೇಪಣೆಯನ್ನ ಸರ್ಕಾರ ಮಾಡಿತ್ತು. ಅದನ್ನ ಬಗೆಹರಿಸಿದ್ದೇನೆ ಆದರೆ ಸರ್ಕಾರ ಸಣ್ಣ ಸಣ್ಣ ವಿಚಾರವಮ್ನೂ ಗಮನಿಸುತ್ತಿರುತ್ತದೆ ಎಂದು ತಿಳಿಸಿದರು.
