ಕ್ರೈಂ

ಪೆಟ್ರೋಲ್ ಬಂಕ್ ಮಾಲೀಕರಿಂದಲೇ ಮ್ಯಾನೇಜರ್ ಗೆ ವಂಚನೆಯ ಆರೋಪ

ಸುದ್ದಿಲೈವ್.ಕಾಂ/ಶಿವಮೊಗ್ಗ

ಪುರಲೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ತನಗೆ ಬಂಕ್ ಮಾಲೀಕರೆ ವಂಚನೆ ಆಗಿರುವುದಾಗಿ ಆರೋಪಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶ್ರೀಮತಿ ಸುಶೀಲಮ್ಮ ಸರ್ವೀಸ್ ಸ್ಟೇಷನ್ ಎಂಬ ಹೆಸರಿನ‌ಪೆಟ್ರೋಲ್ ಬಂಕ್ ನಲ್ಲಿ ಬಸವನ ಗುಡಿ ನಿವಾಸಿ ವಾಸುದೇವ್ ಎಂಬುವರು  ಮ್ಯಾನೇಜರ್ ಆಗಿ 2020 ನೇ ಜೂನ್ ನಿಂದ ಜನವರಿ 2022 ರ ವರೆಗೆ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ.

ಮಾನೇಜರ್ ಆಗಿ ಜವಾಬ್ದಾರಿ ತೆಗೆದುಕೊಂಡಾಗ ಎಸ್ ಬಿ ಐ ಬ್ಯಾಂಕಿನಲ್ಲಿ 13,58,805/- ರೂ ಹಣ ಮತ್ತು ಐಸಿಸಿಐ ಬ್ಯಾಂಕ್ ನಲ್ಲಿ 1161/- ರೂ ಗಳನ್ನು ಆಕೌಂಟ್ ನಲ್ಲಿಹಣವುರುವುದಾಗಿ ತಿಳಿಸಿರುವ ವಾಸುದೇವ್ ನಂತರದಲ್ಲಿ ಬಂಕ್ ಮಾಲೀಕರಾದ ಶ್ರೀಮತಿ ಮೀನಾಕ್ಷಿ ಮನೋಹರ್ ರವರು ಬಂಕ್ ಅಕೌಂಟ್ ನಲ್ಲಿದ್ದ ಹಣವನ್ನು ಸ್ವಂತಕ್ಕೆ ಬಳಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ,

ಬಂಕ್ ನಡೆಸಲು ಕಷ್ಟದ ಸಮಯದಲ್ಲಿ ಅವರ ಮೌಖಿಕ ಹೇಳಿಕೆಯಂತೆ ವಾಸುದೇವ್ ಎಲ್ಲಿಂದಲಾದರೂ ಹಣ ತಂದು ಬಂಕ್ ನಡೆಸಿಕೊಂಡು ಹೋಗು ಎಂದು ಹೇಳಿದ್ದರಿಂದ ವಾಸುದೇವ್ ತನ್ನ ಕುಟುಂಬದ ಸದಸ್ಯರ ಹತ್ತಿರ ಸ್ನೇಹಿತರ ಹತ್ತಿರ ಹಣವನ್ನು ಸಾಲ ತಂದು ಬಂಕ್ ನಡೆಸಿಕೊಂಡು ಹೋಗುತ್ತಿದ್ದರು,

ಅದರೆ ಜನವರಿ ತಿಂಗಳಲ್ಲಿ ವಾಸುದೇವ್ ತಮ್ಮ ಅತ್ತಿಗೆ ಮನೆಗೆ ಹೋಗಿ 6,00,000/- ರೂ ಹಣವನ್ನು ಪಿರ್ಯಾದಿಯವರು ಅವರ ಪತ್ನಿಯಾದ ಮಾಲತಿ ರವರೊಂದಿಗೆ ಮೀನಾಕ್ಷಿ ರವರ ಮನೆಗೆ ಹೋಗಿ ಅವರ ಗಂಡ ಮೋಹನ್‌ ಕುಮಾರ್ ಮಗ ಶ್ರೀಹರಿ ರವರ ಸಮಕ್ಷಮ ಹಣವನ್ನು ಕೊಟ್ಟ ಲೋಡ್ ಹಾಕಿ ಎಂದು ಹೇಳಿದ್ದರು.

ನಂತರ ಫೋನ್ ಮುಖಾಂತರ ಮಾತನಾಡಿ, ಲೆಕ್ಕಾಮಾಡಿ ಹಣ ತೆಗೆದುಕೊಳ್ಳುವ ಮತ್ತು ಕೊಡುವ ಬಗ್ಗೆ ಬಗೆಹರಿಸಿಕೊಳ್ಳೋಣ ಎಂದು ತಿಳಿಸಿದ್ದರು. ಇದನ್ನ ವಾಸುದೇವ್  ಒಪ್ಪಿಕೊಂಡು ಹೋಗಿದ್ದರು.  ಕೆಲ ದಿನಗಳ ನಂತರ ಆಡಿಟಿಂಗ್ ರಿಪೋರ್ಟ್ ಎಲ್ಲಾ ತೆಗೆದುಕೊಂಡು ಹೋದ ವಾಸುದೇವ್ ಗೆ ದಾಖಲೆಗಳನ್ನು ಪರಿಶೀಲಿಸಿದ ಮೀನಕ್ಷಮ್ಮ,  ನಿನಗೆ ನಾವು ಯಾವುದೇ ಹಣವನ್ನು ಕೊಡುವಂತಿಲ್ಲ ಎಂದು ಹೇಳಿ ಬೈದು ಕಳುಹಿಸಿದ್ದಾರೆ.‌

ಆದ್ದರಿಂದ ನನ್ನ  ಮತ್ತು ಆರೋಪಿತರ ನಡುವಿನ ವ್ಯವಹಾರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ತಮಗೆ ಬರಬೇಕಾದ 14,89,190/- ರೂಗಳನ್ನು ಮರು ಪಾವತಿ ಮಾಡಿಸಿಕೊಡಬೇಕೆಂದು ವಾಸುದೇವ್ ಮೀನಕ್ಷಮ್ಮನ‌ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button