ಸ್ಥಳೀಯ ಸುದ್ದಿಗಳು
ಆಗುಂಬೆ ಮೂರನೇ ತಿರುವಿನಲ್ಲಿ ಮರ ಬಿದ್ದು ರಸ್ತೆ ಬ್ಲಾಕ್!

ಸುದ್ದಿಲೈವ್. ಕಾಂ/ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ದಿಡೀರನೇ ಮರವೊಂದು ಬಿದ್ದು ರಸ್ತೆ ಬ್ಲಾಕ್ ಆಗಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು.
ಆಗುಂಬೆಯ ಮೂರನೇ ತಿರುವಿನಲ್ಲಿ ಬೆಳಿಗ್ಗೆ ಉದ್ದದ ಮರವೊಂದು ಧರೆಗುರುಳಿದ್ದು ನಂತರ ಅರಣ್ಯ ಇಲಾಖೆಯವರು ಮರವನ್ನ ಕಟ್ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಇದಕ್ಕೂ ಮೊದಲು ಸಾರ್ವಜನಿಕರು ಮರವನ್ನ ತಳುವ ಕೆಲಸಕ್ಕೂ ಕೈ ಹಾಕಿದ್ದು ನಂತರ ಅರಣ್ಯ ಇಲಾಖೆ ಕಟರ್ ತಂದು ಕಟ್ ಮಾಡುವ ಮೂಲಕ ತೆರವುಗೊಳಿಸಲಾಯಿತು.
