ರೋಹಿತ್ ಚಕ್ರತೀರ್ಥರನ್ನ ಬಂಧಿಸಿ ತನಿಖೆ ನಡೆಸಲು ಆಗ್ರಹ!

ಸುದ್ದಿಲೈವ್.ಕಾಂ/ಶಿವಮೊಗ್ಗ
ಕುವೆಂಪು ಅವರ ನಾಡಗೀತೆಯನ್ನ ಅಪಮಾನಗೊಳಿಸಿದ ಶಾಲಾ ಪಠ್ಯಪುಸ್ತಕ ಪುನರ್ ರಚನೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥರ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಕರ್ನಾಟಕ ರಕ್ಷಣ ವೇದಿಕೆ ಯುವ ಸೇನೆ ಶಿವಮಿಗ್ಗ ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ಗೆ ಮನವಿ ಸಲ್ಲಿಸಿದ್ದಾರೆ.
ಕುವೆಂಪು ಕವನಗಳನ್ನ ಓದಿಕೊಂಡು ಬೆಳೆದ ನಮಗಳಿಗೆ ರೋಹಿತ್ ಚಕ್ರತೀರ್ಥರ ವಿಕೃತ ಹಾಡುಗಳು ಘಾಸಿ ಉಂಟು ಮಾಡಿದೆ. ರೋಹಿತ್ ಚಕ್ರತೀರ್ಥ ಕುವೆಂಪು ಅವರ ನಾಡಗೀತೆಯನ್ನ ತಿರುಚಿ ಬರೆದಿರುವ ಸಾಲುಗಳನ್ನ ಮನವಿ ಪತ್ರದಲ್ಲಿ ಲಗತ್ತಿಸಿ ಮನವಿಯೊಂದಿಗೆ ನೀಡಲಾಗಿದೆ.
ಚಕ್ರತೀರ್ಥರು ತಿರುಚಿ ಬರೆದಿರುವ ಸಾಲುಗಳು ಸೌಹಾರ್ಧತೆ, ಜನರ ಸಹನೆಯನ್ನ ಕೆಡಿಸುವ ಸಾಲುಗಳಾಗಿದೆ. ಅತ್ಯಂತ ಶಾಂತಿಯಿಂದ ಇರುವ ರಾಜ್ಯದಲ್ಲಿ ದೇಶ ವಿರೋಧಿ ಬರಹಗಳು ಅತ್ಯಂತ ಹಿಂಸೆಗೆ ಪ್ರಚೋದಿಸುತ್ತಿವೆ. ಇವರ ಬರಹಗಳು ದುರುದ್ದೇಶದಿಂದ ಕೂಡಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಾಗಾಗಿ ತಕ್ಷಣವೇ ಬಂಧಿಸಬೇಕೆಂದು ರೋಹಿತ್ ಚಕ್ರತೀರ್ಥನ ಮೇಲೆ ಈ ಕೂಡಲೇ ಪರಮ ವರ್ತಮಾನ ಮರದಿ (ಎಫ್ಐಆರ್) ರಾಖಲಿಸಿ ಬಂಧನ ಮಾಡಬೇಕು, ಹೆಚ್ಚಿನ ತನಿಖೆ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ನೀಡುವ ವೇಳೆ ಯುವಸೇನೆ ಅಧ್ಯಕ್ಷ ಕಿರಣ್ ಕುಮಾರ್ ಹೆಚ್.ಎಸ್, ಪದಾಧಿಕಾರಿಗಳಾದ ಶಿವಕುಮಾರ್, ಪ್ರಕಾಶ್, ಹನುಮಂತ ರಾಜ್, ಸಿದ್ದೇಶ್ ಮೊದಲಾದವರು ಉಪಸ್ಥಿತರಿದ್ದರು.
