ಮನೋರಂಜನೆ
ಆನ್ ಲೈನ್ ರಮ್ಮಿ ಆಟವನ್ನ ನಿಷೇಧಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಸುದ್ದಿಲೈವ್.ಕಾಂ/ಶಿವಮೊಗ್ಗ
ಆನ್ ಲೈನ್ ರಮ್ಮಿ ಗೇಮ್ ಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ರಾಜ್ಯ ನಾಗರೀಕರ ರಕ್ಷಣಾ ಸಮಿತಿಯು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದೆ.
ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ನಲ್ಲಿ ರಮ್ಮಿಗೇಮ್ ಗಳು ಹೆಚ್ಚಾಗಿದ್ದು ಇದು ಅನ್ ಲೈನ್ ಜೂಜಿಗೆ ಸಮಾನವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಪ್ರಚಾರ ಹೆಚ್ಚಾಗುತ್ತಿದ್ದು ಇದರಿಂದ ಯುವ ಪೀಳಿಗೆ ಇದರ ಮೊರೆ ಹೋಗುತ್ತಿದ್ದಾರೆ. ಇದು ಆರ್ಥಿಕ ನಷ್ಟವನ್ನು ನೀಡುವುದರ ಜೊತೆಗೆ ಯುವ ಪೀಳಿಗೆಗೆ ಚಟವಾಗಿ ಪರಿಣಮಿಸುತ್ತಿದೆ.
ಜೊತೆಗೆ ಯುವ ಪೀಳಿಗೆಗೆ ದಾರಿ ತಪ್ಪಿಸುವಂತಹ ಕೆಲಸ ಗಳು ಇಂತಹ ಗೇಮ್ ಗಳ ಮುಖಾಂತರ ಅಗುತ್ತಿದ್ದು ಇಂತಹ ಅಪಾಯಕಾರಿ ಹಾಗೂ ಜೂಜಿನ ಗೇಮ್ ಗಳನ್ನು ಈ ಕೂಡಲೇ ನಿಷೇಧಿಸಬೇಕೆಂದು ವಿನಂತಿ.
