ರಾಜಕೀಯ
ಏಕಾಏಕಿ ಬಂಧಿಸಲು ನಾನೇನು ಕುರಿನಾ,, ಕೋಳಿನಾ-ಈಶ್ವರಪ್ಪ

ಸುದ್ದಿಲೈವ್.ಕಾಂ/ಶಿವಮೊಗ್ಗ
ದೆಹಲಿಯಲ್ಲಿ ಆಪ್ ಪಕ್ಷದ ಮಾಜಿ ಸಚಿವ ಈಶ್ವಪ್ಪನವರ ವಿರುದ್ಧ ಎಫ್ಐಆರ್ ದಾಖಲಿಸಿರುವ ಬಗ್ಗೆ ಈಶ್ವರಪ್ಪನವರೇ ಪ್ರತಿಕ್ರಿಯಿಸಿದ್ದು, ಏಕಾಏಕಿ ಬಂಧಿಸಲು ನಾನೇನು ಕುರಿನಾ ಅಥವಾ ಕೋಳಿನಾ ಎಂದು ತಿರುಗೇಟು ನೀಡಿದ್ದಾರೆ.
ಅವರು ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವರು ವಿಧಾನ ಸಭೆಯಲ್ಲೂ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದೆ, ಮುಂದಿನ 100 150 ವರ್ಷಗಳಲ್ಲಿ ಕೆಂಪು ಕೋಟೆಯಲ್ಲಿ ಭಗವಧ್ವಜ ಹಾರಿಸಬಹುದು ಎಂದು ಹೇಳಿದ್ದೆ.
ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ವಿಧಾನ ಸಭೆಯಲ್ಲಿ ಮುಖ್ಯಮಂತ್ರಿಗಳು, ಕಾನೂನು ಸಚಿವರು, ಸಭಾಧ್ಯಕ್ಷರೇ ಹೇಳಿಕೆ ಬಗ್ಗೆ ಬೆಂಬಲ ಸೂಚಿಸಿದ್ದರು. ಕಾಂಗ್ರೆಸ್ ನವರು ಆಗಲೇ ಗುಲ್ಲೆಬ್ಬಿಸಲು ಯತ್ನಿಸಿದ್ದರು. ಆಗಲಿಲ್ಲ. ಈಗ ಹೊಸಬರು ಬಂದಿದ್ದಾರೆ. ಪ್ರಚಾರಕ್ಕೆ ಎಫ್ಐಆರ್ ದಾಖಲಿಸಿದ್ದಾರೆ. ಹಾಕಲಿ ಬಿಡಿ ಎಂದು ತಿರುಗೇಟು ನೀಡಿದರು.
