ಪೈಸಾಲೆಕ್ಕಾಚಾರದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಕಡಿತ

ಸುದ್ದಿಲೈವ್.ಕಾಂ/ಶಿವಮೊಗ್ಗ
ಈ ಹಿಂದೆ ಪೆಟ್ರೋಲ್ ಮತ್ತು ಡಿಸೇಲ್ ದರಗಳು ಹೇಗೆ ಪೈಸಾ ಲೆಕ್ಕಾಚಾರದಲ್ಲಿ ಏರಿಕೆಯಾಗುತ್ತಿದ್ದವೋ ಅದೇ ರೀತಿ ಈಗ ಪೈಸಾ ಲೆಕ್ಕಾಚಾರದಲ್ಲಿ ಕಡಿಮೆ ಯಾಗಲು ಆರಂಭಿಸಿವೆ.
ಕಳೆದ ಎರಡು ಮೂರು ವರ್ಷದಿಂದ ಪೈಸಾ ಲೆಕ್ಕಾಚಾರದಲ್ಲಿ 30 ರಿಂದ 40 ರೂ ಏರಿಕೆಯಾಗಿ ದಿಡೀರ್ ಅಂತ ಎರಡು ಬಾರಿ ದರವನ್ನ ಕಡಿಮೆಗೊಳಿಸಲಾಗಿತ್ತು. ದೀಪಾವಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಮಾರು 15 ರೂ.ಗಳನ್ನ ಕಡಿಮೆ ಮಾಡಿತ್ತು.
ಅದೇ ರೀತಿ ಮೊನ್ನೆ ಮೇ.22 ರಂದು ಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನ 9.15 ರೂ. ಮತ್ತು ಡಿಸೇಲ್ ದರವನ್ನ 7 ರೂ.ವರೆಗೆ ತಗ್ಗಿಸಿತ್ತು. ಈಗ ಪೈಸಾಲೆಕ್ಕಾಚಾರದಲ್ಲಿ ಎರಡೂ ತೈಲಗಳ ದರವನ್ನ ಕಡಿಮೆಗೊಳಿಸಲಾಗಿದೆ.
ಈ ಪ್ರಕ್ರಿಯೆ ಹೀಗೆ ಮುಂದುವರೆಯುತ್ತಾ ಅಥವಾ ಇವತ್ತಿಗೆ ಈ ತರಹ ದರ ಕುಸಿತ ಇವತ್ತಿಗೆ ಕೊನೆಯೋ… ಗೊತ್ತಿಲ್ಲ. ಆದರೆ ಪೈಸಾ ಲೆಕ್ಕಾಚಾರದಲ್ಲಿ ದರ ಕಡಿಮೆಯಾಗಿದೆ.
103.40 ರೂ ಇದ್ದ ಪೆಟ್ರೋಲ್ 103.24 ರೂ ಆಗಿದೆ. ಇದರಿಂದ 14 ಪೈಸೆ ಕಡಿಮೆಯಾಗಿದೆ. 89.12 ರೂ ಇದ್ದ ಡಿಸೇಲ್ 89.02 ರೂ. ಪವರ್ ಪೆಟ್ರೋಲ್ 107.79 ರೂನಿಂದ 107.65 ರೂಗೆ ಇಳಿಸಲಾಗಿದೆ. 92.20 ರೂ ಇದ್ದ ಟರ್ಬೋ ಜೆಟ್ ದರವನ್ನ 92.10 ರೂಗೆ ಇಳಿಕೆಯಾಗಿದೆ.
