ಕ್ರೈಂ
ತಾಯಿಯನ್ನ ಪಜ್ಞೆ ತಪ್ಪುವಂತೆ ಥಳಿಸಿ ಮಗಳ ಕಿಡ್ನಾಪ್!

ಸುದ್ದಿಲೈವ್.ಕಾಂ/ಶಿವಮೊಗ್ಗ
ಮನೆಗೆ ನುಗ್ಗಿ ತಾಯಿಗೆ ಪ್ರಜ್ಞೆ ತಪ್ಪುವಂತೆ ಹೊಡೆದು ಅವರ ಮಗಳನ್ನ ಅಪಹರಿಸಿರುವ ಘಟನೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿನೋಬ ನಗರ ಠಾಣಾ ವ್ಯಾಪ್ತಿಯಲ್ಲಿರುವ ಮಹಿಳೆಯ ಮನೆಗೆ ನುಗ್ಗಿದ ಟ್ಯಾಂಕ್ ಮೊಹಲ್ಲಾ ನಿವಾಸಿ ದರ್ಶನ್ ಮೊದಲು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಮಗಳನ್ನ ಅಪಹರಿಸಿಕೊಂಡು ಹೋಗಿದ್ದಾನೆ.
ತಡರಾತ್ರಿ ಈ ಘಟನೆ ನಡೆದಿದೆ. ಇದೊಂದು ಮೇಲ್ನೋಟಕ್ಕೆ ಪ್ರೇಮ ಪ್ರಕರಣವಿದ್ದಂತೆ ಕಂಡು ಬರುತ್ತಿದೆ. ಆದರೆ ಥಳಿತಕ್ಕೆ ಒಳಗಾದ ಮಹಿಳೆ ಇದನ್ನ ಕಿಡ್ನ್ಯಾಪ್ ಪ್ರಕರಣವೆಂದು ಎಫ್ಐಆರ್ ದಾಖಲಿಸಿದ್ದಾರೆ.
ಮಗಳನ್ನ ತಲೆ ಕೂದಲು ಹಿಡಿದುಕೊಂಡು ಕರೆದುಕೊಂಡುಹೋಗಿರುವ ದರ್ಶನ್ ತನ್ನ ಜೊತೆ ಬರದಿದ್ದರೆ ತಾಯಿಯ ಜೊತೆ ನಿನ್ನನ್ನೂ ಸಾಯಿಸಿಬಿಡುವುದಾಗಿ ಮಗಳಿಗೆ ಬೆದರಿಕೆ ಹಾಕಿದ್ದಾನೆ.
ಈತನಿಂದ ನಮಗೆ ಮತ್ತು ತನ್ನ ಮಗಳಿಗೆ ಪ್ರಾಣಭಯವಿದೆ. ತಕ್ಷಣವೇ ಮಗಳನ್ನ ಹುಡುಕಿಕೊಡಬೇಕು ಮತ್ತು ದರ್ಶನ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಸಾವಿತ್ರಮ್ಮ ದೂರಿನಲ್ಲಿ ದಾಖಲಿಸಿದ್ದಾರೆ
