ಸುದ್ದಿ
ಬೊಮ್ಮನ್ ಕಟ್ಟೆಯಲ್ಲಿ ಎರಡು ಬೈಕ್ ಗಳ ನಡುವೆ ಡಿಕ್ಕಿ -ಪೈಂಟರ್ ಗಣೇಶ್ ಸಾವು

ಸುದ್ದಿಲೈವ್. ಕಾಂ/ಶಿವಮೊಗ್ಗ
ಶಿವಮೊಗ್ಗ ಬೊಮ್ಮನ್ ಕಟ್ಟೆಯಲ್ಲಿ ಎರಡು ಬೈಕ್ ಗಳ ನಡುವೆ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಇಂದು ರಾತ್ರಿ ಸುಮಾರು 9-30 ರ ವೇಳೆಗೆ ನಡೆದಿದೆ.
ವಿನೋಬ ನಗರ ಕಡೆಯಿಂದ ಬೊಮ್ಮನ್ ಕಟ್ಟೆಯ ಎ ಬ್ಲಾಕ್ ಮೈಲಮ್ಮ ದೇವಸ್ಥಾನದ ಬಳಿಯಿರುವ ಮನೆಗೆ ತೆರಳುವಾಗ ಮಮತಾ ಲೇಔಟ್ ಬಳಿ ಕೆಎ 26 ಕೆ 3759 ಸ್ಪ್ಲೆಂಡರ್ ಬೈಕ್ ಗೆ ಎದುರಿನಿಂದ ಬಂದ ಕೆಎ 14 ಇಒ 9470 ಕ್ರಮ ಸಂಖ್ಯೆ ಬೈಕ್ ಡಿಕ್ಕಿ ಹೊಡೆದಿದೆ.
ಕೆಎ 14 ಇಒ 9470 ಕ್ರಮಸಂಖ್ಯೆ ವಾಹನದಲ್ಲಿ ಮೂವರು ಹುಡುಗರು ಚಲಿಸುತ್ತಿದ್ದು ಎದುರಿನಿಂದ ಬಂದ ಸ್ಪ್ಲೆಂಡರ್ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಸ್ಪ್ಲೆಂಡರ್ ಬೈಕ್ ಸವಾರ ಗಣೇಶ(38) ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಪೊಲೀಸರು ಸ್ಥಳಕ್ಕೆ ಬಂದು ತ್ರಿಬ್ಬಲ್ ರೈಡಿಂಗ್ ಮಾಡುತ್ತಿದ್ದ ಮೂವರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಗಣೇಶ್ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದರು ಎನದನಲಾಗಿದೆ.
