ಕ್ರೈಂ
ಎರಡು ಬೈಕ್ ಗಳ ನಡುವೆ ಡಿಕ್ಕಿ ಯುವಕನ ಸ್ಥಿತಿ ಗಂಭೀರ

ಸುದ್ದಿಲೈವ್. ಕಾಂ/ಶಿವಮೊಗ್ಗ
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಗಳಾಗಿದ್ದು, ಅಪಘಾತದಲ್ಲಿ ಯುವಕನ ಸ್ಥಿತಿ ಗಂಭೀರವಾಗಿದೆ. ಆತನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಸೂರು ಗ್ರಾಮಪಂಚಾಯಿತಿಯ ಐಗಿನಬೈಲು ಬಳಿ ಈ ಅಪಘಾತ ನಡೆದಿದ್ದು ಅಪಘಾತದಲ್ಲಿ ತೀವ್ರ ಗಾಯಗಳಾದ ಯುವಕನನ್ನ ಶರತ್ ಎಂದು ಗುರುತಿಸಲಾಗಿದೆ. ಆತನನ್ನ ತಕ್ಷಣವೇ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ ಶರತ್ ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದು ಐಗಿನಬೈಲು ಬಳಿ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಬೈಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಶಿವಮೊಗ್ಗದ ಕಡೆಯಿಂದ ಬಂದ ಬೈಕ್ ಸವಾರ ದಾವಣಗೆರೆಯವನು ಎಂದು ತಿಳಿದುಬಂದಿದೆ.
ಶರತ್ ತಲೆಗೆ ತೀವ್ರವಾಗಿ ಪೆಟ್ಟುಬಿದ್ದಿದೆ ಎನ್ನಲಾಗಿದೆ. ಶರತ್ ಸಾಗರ ಶಾಸಕ ಹರತಾಳು ಹಾಲಪ್ಪನವರ ತಮ್ಮನ ಮಗ ಎಂದು ಹೇಳಲಾಗುತ್ತಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
