ನೂತನವಾಗಿ ಮದುವೆಯಾದ ಯುವತಿಗೆ ಬ್ಲಾಕ್ ಮೇಲ್-ದೂರು ದಾಖಲು

ಸುದ್ದಿಲೈವ್.ಕಾಂ/ಶಿವಮೊಗ್ಗ
ಸ್ನೇಹದಲ್ಲಿ ಇದ್ದಾಗ ಬೆಳೆದ ಸಲುಗೆ ಮತ್ತು ಖಾಸಗಿ ಫೊಟೊಗಳು ಮದುವೆಯಾದ ನಂತರ ಮಹಿಳೆಗೆ ಮುಳ್ಳಾಗಿದೆ. ಹಳೆಯ ಸ್ನೇಹಿತ ಬ್ಲಾಕ್ ಮೇಲರ್ ಆಗಿ ಜೀವಬೆದರಿಕೆ ಹಾಕಿರುವ ಘಟನೆ ಠಾಣೆಯ ಮೆಟ್ಟಿಲೇರಿದೆ.
ತಾಯಿಯ ಮೂಲಕ ಹಾಸನದ ಕೆಳವತ್ತಿ ಗ್ರಾಮದ ಗಿರೀಶ್ ಎಂಬ ಯುವಕ ಶಿವಮೊಗ್ಗದ ಯುವತಿಯೊಬ್ಬಳಿಗೆ ಆಕೆಯ ತಾಯಿಯ ಮೂಲಕ ಪರಿಚಯವಾಗಿರುತ್ತದೆ. ಕಳೆದ ಐದು ವರ್ಷದಹಿಂದೆ ಈ ಯುವಕ ಪರಿಚಯವಾಗಿದ್ದು 7 ತಿಂಗಳ ಹಿಂದೆ ಇಷ್ಟ ಪಟ್ಟ ಯುವತಿ ಬಳ್ಳಾರಿಯ ಯುವಕನನ್ನ ಮದುವೆಯಾಗಿದ್ದಾಳೆ.
ಇದನ್ನ ಅರಗಿಸಿಕೊಳ್ಳದ ಯುವಕ ದಿಡೀರ್ ನೇ ಯುವತಿಗೆ ಕರೆ ಮಾಡಿರುವ ಗಿರೀಶ್ ನನ್ನನ್ನ ಬಿಟ್ಟು ಅವನನ್ನ ಮದುವೆಯಾಗಿದ್ದೀಯ. ಆದರೆ ನೀನು ಹಾನಕ್ಕೆ ಬರಬೇಕು ಇಲ್ಲ ಅಂದರೆ ನನ್ನೊಂದಿಗೆ ಇರುವ ಖಾಸಗಿ ಫೊಟೊಗಳನ್ನ ನಿನ್ನ ಗಂಡ ಮತ್ತು ನಿನ್ನ ಸಂಬಂಧಿಕರಿಗೆ ಹಂಚಿಬಿಡುವುದಾಗಿ ಬೆದರಿಸಿದ್ದಾನೆ.
ಈ ವಿಷಯ ನನ್ನ ಪತಿ ಮತ್ತು ತಾಯಿಗೆ ಈ ವಿಷಯಗಳು ಗೊತ್ತಿರುವುದಾಗಿ ತಿಳಿಸಿರುವ ಯುವತಿ ಅವ್ಯಾಚ್ಯ ಶಬ್ದಗಳಿಂದ ಬೈದ ಹಾಗೂ ಜೀವಬೆದರಿಕೆ ಹಾಕಿರುವ ಗಿರೀಶ್ ವಿರುದ್ಧ ಸೂಕ್ತ ಕ್ರಮಜರುಗಿಸುವಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
