ಕ್ರೈಂ

ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ಅಕ್ರಮ ಮರಳು ಸಾಗಾಟ-ವಾಹನಗಳು ಸೀಜ್

ಸುದ್ದಿಲೈವ್.ಕಾಂ/ಹೊಸನಗರ/ತೀರ್ಥಹಳ್ಳಿ

ಶಿವಮೊಗ್ಗ ಜಿಲ್ಲೆಯ ಎರಡು ತಾಲೂಕುಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನ ಪೊಲೀಸರು ವಶಪಡಿಸಿಕೊಂಡು ಎಫ್ಐಆರ್ ದಾಖಲಿಸಿದ್ದಾರೆ.

ಅಕ್ರಮ ಮರಳು ಸಾಗಾಣಿಕೆಯ ಮಾಹಿತಿ ಆಧಾರದ ಮೇರೆಗೆ ಹೊಸನಗರದಲ್ಲಿ 4 ಟ್ರಿಪ್ಪರ್ ತೀರ್ಥಹಳ್ಳಿಯಲ್ಲಿ 1 ಟ್ರ್ಯಾಕ್ಟರ್ ನ್ನ ನಿನ್ನೆ ವಶಪಡಿಸಿಕೊಳ್ಳಲಾಗಿದೆ. ಆದರೆ ಈ‌ ನಾಲ್ಕು ವಾಹನಗಳ ಚಾಲಕರು ಘಟನೆಗಳು ಪರಾರಿಯಾಗಿದ್ದಾರೆ.

ಹೊಸನಗರದಲ್ಲಿ ಮಳಲಿ ಮತ್ತು ಜಯನಗರದಲ್ಲಿ ನಾಲ್ಕು ಟ್ರಿಪ್ಪರ್ ಗಳಲ್ಲಿ ಮರಳು ಸಾಗಿಸುತ್ತಿದ್ದಾಗ ತಪಾಸಣೆ ನಡೆಸಿದ ಪೊಲೀಸರಿಗೆ ಯಾವ ದಾಖಲಾತಿಗಳು ಲಭ್ಯವಾಗದ ಹಿನ್ನಲೆಯಲ್ಲಿ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ನಾಲ್ಕು ಟ್ರಪ್ಪರ್ ವಾಹನಗಳನ್ನ ಸೀಜ್ ಮಾಡಿ ಠಾಣೆಗೆ ತಂದಿರಿಸಲಾಗಿದೆ.

ಅದರಂತೆ ತೀರ್ಥಹಳ್ಳಿಯ ಆರಗದಲ್ಲಿ ಟ್ರ್ಯಾಕ್ಟರ್ ವೊಂದನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button