ರಾಕೇಶ್ ಟಿಕಾಯತ್ ಮೇಲೆ ಹಲ್ಲೆ-SDPI ಸಂಘಟನೆ ತೀವ್ರ ಖಂಡನೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ರೈತ ಸಂಘದ ಸಭೆಗೆ ನಿಮಿತ್ತ ಆಗಮಿಸಿದ್ದ ರೈತ ಹೋರಾಟದ ಪ್ರಮುಖ ನಾಯಕರಾದ ರಾಕೇಶ್ ಟಿಕಾಯತ್ ಹಾಗೂ ಯದುವೀರ್ ಸಿಂಗ್ ರವರ ಮೇಲೆ ಏಕಾಏಕಿ ಮಸಿ ಬಳಿದು ಹಲ್ಲೆಗೆ ಯತ್ನಿಸಿದ ಪುಂಡರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಈ ಶಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಿ ಬಹಿರಂಗ ಪಡಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸುತ್ತದೆ.
ರೈತ ವಿರೋಧಿ ಕಾನೂನಿನ ವಿರುದ್ಧ ದೆಹಲಿಯ ಗಡಿಯಲ್ಲಿ ಬಿಜೆಪಿಯ ಮೋದಿ ಸರ್ಕಾರದ ವಿರುದ್ಧ ಧರಣಿ ನಡೆಸಿದ್ದು ವಿಶ್ವಾದ್ಯಂತ ಹೆಸರು ಮಾಡಿತ್ತು ನಂತರ ಮೋದಿ ಸರ್ಕಾರ ರೈತರ ಹೋರಾಟಕ್ಕೆ ಮಣಿದು ಕೆಲ ಕಾನೂನು ವಾಪಾಸ್ ಪಡೆದುಕೊಂಡಿತ್ತು. ಈ ಹೋರಾಟದ ಮುಂಚೂಣಿಯಲ್ಲಿದ್ದ ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ನಾಯಕರಾದ ರಾಕೇಶ್ ಟಿಕಾಯತ್ ಹಾಗೂ ಯದುವೀರ್ ಸಿಂಗ್ ಬೆಂಗಳೂರಿಗೆ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.
ನಂತರ ಪತ್ರಿಕಾ ಗೋಷ್ಠಿ ನಡೆಸುವ ಸಂದರ್ಭದಲ್ಲಿ ಕೆಲ ಪುಂಡರು ಮೋದಿ ಮೋದಿ ಎಂದು ಕೂಗಿಕೊಂಡು ಮಸಿ ಬೆಳೆದು ಹಲ್ಲೆಗೆ ಮುಂದಾಗಿದ್ದಾರೆ. ಈಕೃತ್ಯ ಸರ್ಕಾರದ ಪ್ರಾಯೋಜಿತವೇ ಎಂದು ಸಂಶಯ ಮೂಡುತ್ತಿದೆ. ಕರ್ನಾಟಕಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ರೈತರ ರಾಷ್ಟ್ರೀಯ ನಾಯಕರ ಮೇಲೆ ಹಲ್ಲೆ ಖಂಡನೀಯ ಮತ್ತು ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಿದೆ,
ಇಂತಹ ಬೆಳವಣಿಗೆ ರಾಜ್ಯಕ್ಕೆ ಶೋಭೆ ತರುವಂತಹದಲ್ಲ ಕೂಡಲೇ ಇದರ ಬಗ್ಗೆ ಸಮಗ್ರ ತನಿಖೆ ನಡೆಯಲಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮನವಿಯಲ್ಲಿ ಆಗ್ರಹಿಸಿದೆ.
