ಮನೋರಂಜನೆ

ಜನ ಅಂದುಕೊಂಡಂತೆ ನಡೆಯಲಿಲ್ಲ ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆ!

IMG_20220531_101242 IMG_20220531_111536

ಸುದ್ದಿಲೈವ್.ಕಾಂ/ಶಿವಮೊಗ್ಗ

ಇಂದು ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಗಳು ಸರಳವಾಗಿ ದೊರೆಯುತ್ತಿದೆ. ಪೆಟ್ರೋಲ್ ಬಂಕ್ ನಲ್ಲಿ ಕಳೆದೆರಡು ದಿನಗಳಿಂದ ಭೀತಿಗೊಂಡಿದ್ದ ಜನ ಇಂದು ಸಹ ಪೆಟ್ರೋಲ್ ಮತ್ತು ಡಿಸೇಲ್ ಸಿಗುತ್ತಿರುವುದರಿಂದ ಸಂತಸ ವ್ಯಕ್ತಪಡಿಸಿದ್ದಾರೆ.

ಆದರೆ ಈ ಮೊದಲು ಪೆಟ್ಟ್ರೋಲ್ ಬಂಕ್ ಮಾಲೀಕರು ಸ್ಪಷ್ಟಪಡಿಸಿದ್ದು ಖರೀದಿ ಮಾತ್ರ ನಿಲ್ಲಿಸಲಾಗುತ್ತಿದ್ದು ಮಾರಾಟವನ್ನ ಸ್ಥಗಿತಗೊಳಿಸುವುದಿಲ್ಲವೆಂದು ಸ್ಪಷ್ಡಪಡಿಸಿದ್ದರು. ಆದರೂ ಜನ ತೈಲ ಸಿಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮುಗಿಬಿದ್ದಿದ್ದರು. ಆದರೆ ಇಂದು ಎಲ್ಲಾ ಬಂಕ್ ಗಳಲ್ಲಿ ತೈಲಗಳು ದೊರೆತಿವೆ.

ಪೆಟ್ರೋಲ್ ಮತ್ತು ಡಿಸೇಲ್ ಗಳ ದಿಡೀರ್ ಕಡಿಮೆಗೊಳಿಸಿದ್ದು, 2017 ರಲ್ಲಿ ಅಪೂರ್ವ ಚಂದ್ರ ಕಮಿಟಿಯ ವರದಿಯನ್ನ ಜಾರಿಗೊಳಿಸಿ ಕಮಿಷನ್‌ಬೇಸಿಸ್ ನ್ನ ಹೆಚ್ಚಿಸಬೇಕು ಎಂಬುದು ಪೆಟ್ರೋಲ್ ಬಂಕ್ ಮಾಲೀಕರು ಪ್ರಮುಖ‌ಬೇಡಿಕೆ ಇಟ್ಟುಕೊಂಡು ಇಂದು ಬಂಕ್ ಮಾಲೀಕರು ತಮ್ಮ ಪೆಟ್ರೋಲಿಯಂ ಸಂಸ್ಥೆಯಿಂದ ಇಂಡೆಂಟ್ ಹಾಕಿ ತೇಲ ಖರೀದಿಸಿಲ್ಲ.

ಈ ಸುದ್ದಿ ಬೇರೆಯ ರೀತಿಯಲ್ಲಿ ಪ್ರಚಾರವಾಗಿರೋದಕ್ಕೆ ಜನ ನಿನ್ನೆ ಪೆಟ್ರೋಲ್ ಮತ್ತು ಡಿಸೇಲ್ ಖರೀದಿಗೆ ಕ್ಯಾನ್ ಹಿಡಿದುಕೊಂಡು ಬಂದ ಹಿನ್ನಲೆಯಲ್ಲಿ ಬಂಕ್ ನಲ್ಲಿ ತೈಲ ಖರೀದಿಗೆ ಮುಗಿಬಿದ್ದಿದ್ದ ಚಿತ್ರ ಕಂಡು ಬಂದಿತ್ತು.

ಇಂದು ಸಹ‌ಭಾರ್ಗವಿ ಪೆಟ್ರೋಲ್ ಬಂಕ್, ನಂದಿ ಪೆಟ್ರೋಲ್ ಬಂಕ್ ಗಳಲ್ಲಿ ಸಾಮಾನ್ಯವಾಗಿ ಜನರ ಜಮಾವಣೆ ಆಗಿತ್ತು. ಆಟೋ ಗ್ಯಾಸ್ ಬಂಕ್ ಗಳು ಬಂದ್ ಆಗಿದ್ದು ಕಂಡು ಬಂದಿದೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ಮೂರು ಕಾರ್ಪೋರೇಷನ್ ಗಳಿವೆ. ಹಿಂದೂಸ್ಥಾನ್ ಪೆಟ್ರೋಲ್, ಇಂಡಿಯನ್ ಆಯಿಲ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಬಂಕ್ ಬಳಿವೆ. ಇವರುಗಳು ತಮ್ಮ ಓಟ್ ಲೆಟ್ ಗಳಲ್ಲಿ ಸುಮಾರು 6½ ಲಕ್ಷ ಪೆಟ್ರೋಲ್ ಡಿಸೇಲ್ ಖರೀದಿ ಆಗುವ ಮಾಹಿತಿ ಇದೆ. ಈ ಇಂಡೆಂಟ್ ಗಳನ್ನ ಮಾಲೀಕರು ಬಂದ್ ಮಾಡಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button