ಮನೋರಂಜನೆ

ಟ್ಯೂಮೋಕ್‌ ಆ್ಯಪ್‌ ಮೂಲಕ ಜೂನ್‌ ತಿಂಗಳ ಬಿಎಂಟಿಸಿ ಮಾಸಿಕ ಪಾಸ್‌ ಬುಕ್‌ ಪಡೆದುಕೊಳ್ಳಿ!

ಸುದ್ದಿಲೈವ್. ಕಾಂ/ಬೆಂಗಳೂರು, ಮೇ.28

ಬೆಂಗಳೂರು ಮೆಟ್ರೋಪಾಲಿಟನ್‌ ಸಾರಿಗೆ ನಿಗಮ (BMTC)ದೊಂದಿಗಿನ ಪಾಲುದಾರಿಕೆಯಲ್ಲಿನ ಟಿಕೆಟ್‌/ಪಾಸ್‌ ಬುಕಿಂಗ್‌ ಫೀಚರ್‌ಗಳನ್ನು ಯಶಸ್ವಿಯಾಗಿ ಆರಂಭಿಸಿದ ನಂತರ ಭಾರತದ ಏಕೈಕ ಪೇಟೆಂಟ್‌ ಹೊಂದಿರುವ ಮಲ್ಟಿ ಮಾದರಿ ಟ್ರಾನ್ಸಿಟ್‌ ಆ್ಯಪ್‌ ಟ್ಯೂಮೋಕ್‌, ಈಗ ತಮ್ಮ ಆ್ಯಪ್‌ಗೆ ದೊಡ್ಡ ಆರ್ಡರ್‌ ಗಳಿಸಿದೆ. ಈ ಆ್ಯಪ್‌ ಬಿಡುಗಡೆಯಾದ ಮೊದಲ ತಿಂಗಳಲ್ಲೇ 5000ಕ್ಕೂ ಹೆಚ್ಚು ಬಳಕೆದಾರರು ಮಾಸಿಕ ಪಾಸ್‌ಗಳನ್ನು ಬುಕ್‌ ಮಾಡಿದ್ದಾರೆ.

ಮಾಸಿಕ ಪಾಸ್‌ ಬುಕಿಂಗ್‌ 2022ರ ಮೇ 28ರಂದು ಆರಂಭಗೊಂಡಿದೆ.  ಜೂನ್‌ ತಿಂಗಳ ಇಡೀ ಈ ಟ್ಯೂಮೋಕ್ ಆಪ್ ಮೂಲಕ ಪಾಸ್ ಗಳನ್ನ ಪಡೆಯಬಹುದಾಗಿದೆ. ಟ್ಯೂಮೋಕ್‌ನ ಪ್ರಮುಖ ಉದ್ದೇಶವೆಂದರೆ ಪ್ರಯಾಣಿಕರಿಗೆ ಒಂದು ಸ್ಥಳದಿಂದ ಇನ್ನೊಂದಕ್ಕೆ ಸಂಪರ್ಕ ಒದಗಿಸುವುದು ಮತ್ತು ಡಿಜಿಟಲ್‌ ಟಿಕೆಟ್‌ ಅಥವಾ ಪಾಸ್‌ ಆಯ್ಕೆಗಳ ಮೂಲಕ ಆ್ಯಪ್‌ನಲ್ಲಿ ಸುಲಭವಾಗಿ ಟ್ರಿಪ್‌ ಬುಕ್‌ ಮಾಡುವ ಅವಕಾಶ ಕಲ್ಪಿಸುವುದಾಗಿದೆ. ಟ್ಯೂಮೋಕ್‌ ಇದಕ್ಕೆ ಪೇಟೆಂಟ್‌ ಪಡೆದಿರುವ ತಂತ್ರಜ್ಞಾನ ಬಳಕೆ ಮಾಡುತ್ತಿದ್ದು, ಇದು ಬಳಕೆದಾರರಿಗೆ ಸ್ಥಳವನ್ನು ಟ್ರ್ಯಾಕ್‌ ಮಾಡುವುದನ್ನು ಸರಳೀಕರಿಸುತ್ತದೆ. ಜೊತೆಗೆ, ಬಳಕೆದಾರರಿಗೆ ಬಸ್‌ಗಳು ನಿಗದಿತ ಸಮಯಕ್ಕೆ ಬರುತ್ತಿವೆಯೇ ಮತ್ತು ಅವರು ನಿಗದಿಪಡಿಸಿದ ಮಾರ್ಗಗಳಲ್ಲಿ ಮಾತ್ರ ಸಂಚರಿಸುತ್ತಿವೆಯೇ ಎಂಬುದನ್ನು ನಿರ್ಧರಿಸಲು ಸುಲಭವಾಗುತ್ತದೆ.

ಟ್ಯೂಮೋಕ್‌, ಅಪ್ಲಿಕೇಶನ್ ಮೂಲಕ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್‌ಗಳನ್ನು ಖರೀದಿಸುವ ಮೂಲಕ ಹೆಚ್ಚುವರಿ ಕ್ಯಾಶ್‌ಬ್ಯಾಕ್‌ಗಳನ್ನು ಒಳಗೊಂಡಿರುವ ಕೆಲವು ಪ್ರಯೋಜನಗಳನ್ನು ನೀಡುತ್ತಿದೆ. ಈ ಬಳಕೆದಾರರು ತಮ್ಮ ಸ್ನೇಹಿತರಿಗೆ ಆ್ಯಪ್‌ ಅನ್ನು ರೆಫರ್‌ ಮಾಡಿದರೆ, ಅದಕ್ಕಾಗಿ ರೆಫರಲ್ ಹಣವನ್ನು ಸಹ ಗಳಿಸುತ್ತಾರೆ. ಇದರಿಂದ ಜನರು ಭೌತಿಕ ಪಾಸ್‌ ಕೊಂಡೊಯ್ಯುವ ಅಥವಾ ಅದಕ್ಕಾಗಿ ದೀರ್ಘಕಾಲ ಸರತಿ ಸಾಲುಗಳಲ್ಲಿ ಕಾಯುವ ಕಷ್ಟವನ್ನು ತಪ್ಪಿಸಿಕೊಳ್ಳಬಹುದು.

ಈ ಕುರಿತು ಮಾತನಾಡಿದ ಟ್ಯೂಮೋಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಓ ಹಿರಣ್ಮಯ್‌ ಮಲ್ಲಿಕ್‌, “ಇದು ಲೈವ್‌ ಮಾಹಿತಿ ಒದಗಿಸುವ ಬಹು-ಮಾದರಿ ಸಂಪರ್ಕ ಒದಗಿಸುವ ಒಂದೇ ಆ್ಯಪ್‌ ಆಗಿದೆ. ಟ್ಯೂಮೋಕ್‌ನೊಂದಿಗೆ, ನಾವು ಜನರಿಗೆ ಗೊಂದಲರಹಿತ ಮತ್ತು ಅನುಕೂಲಕರ ಆಯ್ಕೆಗಳನ್ನು ಒದಗಿಸಲು ಮತ್ತು ಮೆಟ್ರೋ ಅಥವಾ ಬಸ್‌ಗಳಿಗೆ ಕಾಯುವ ಕಷ್ಟಗಳನ್ನು ತಪ್ಪಿಸಲು ಬಯಸುತ್ತೇವೆ. ಪ್ರಯಾಣಿಕರಿಗೆ ಸಂಪೂರ್ಣ ಮಾಹಿತಿ ಇರಬೇಕು ಮತ್ತು ಉತ್ತಮ ಆಯ್ಕೆ ಮಾಡಲು ಅವಕಾಶ ಕಲ್ಪಿಸುವುದು ಇದರ ಉದ್ದೇಶ” ಎಂದರು.

ಟ್ಯೂಮೋಕ್‌ ಶೀಘ್ರದಲ್ಲೇ ನಗರದೊಳಗೆ ವಿದ್ಯಾರ್ಥಿ ಪಾಸ್‌ ಬುಕಿಂಗ್‌ ಫೀಚರ್‌ ಅನ್ನು ಬಿಡುಗಡೆಗೊಳಿಸಲಿದೆ. 2022ರ ಅಂತ್ಯದೊಳಗೆ ಇದನ್ನು 15 ಹೊಸ ಸ್ಥಳಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button