ಸ್ಥಳೀಯ ಸುದ್ದಿಗಳು

ರಾಜ್ಯ ರೈತ ಸಂಘದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ-ನೂತನ ಅಧ್ಯಕ್ಷರಾಗಿ ಹೆಚ್ ಆರ್ ಬಸವರಾಜಪ್ಪ ನೇಮಕ

ಸುದ್ದಿಲೈವ್.ಕಾಂ/ಶಿವಮೊಗ್ಗ

ಕೋಡಿಹಳ್ಳಿ ಚಂದ್ರಶೇಖರ್ ಅವರನ್ನ ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ನೂತನ ಸಮಿತಿ ಅಧಿಕಾರಕ್ಕೆ ಬಂದಿದೆ. ಕೋಡಿಹಳ್ಳಿಯ ಆರೋಪದ ಬಗ್ಗೆ ಮಾಹಿತಿ ಪಡೆಯಲು ಸತ್ಯಶೋಧನ ಸಮಿತಿ ರಚಿಸಲಾಗಿದೆ ಎಂದು ನೂತನವಾಗಿ ಆಯ್ಕೆಯಾದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹೆಚ್ ಆರ್ ಬಸವರಾಜಪ್ಪ ತಿಳಿಸಿದರು.

ಅವರು ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಕ್ಷಾಂತರ ರೈತರು ಪೊಲೀಸರ ಲಾಠಿ ಏಟು, ಬೂಟುಕಾಲಿನ ಒದೆಯನ್ನ ತಿಂದಿದ್ದಾರೆ. ರೈತರ ರಕ್ತದಿಂದ ಕಟ್ಟಲಾದ ಸಂಘಟನೆ ಆಗಿದೆ.

ಸಂಘಟನೆ ಹಳಿ ಹಳ್ಳಿಯಿಂದ ಕಟ್ಟಲಾದ ಸಂಘಟನೆಯಾಗಿದೆ. ರಾಜಕೀಯ ಪಕ್ಷಗಳ ಅದ್ದೂರಿ ತನಕ್ಕೆ ರೈತ ಸಂಘಟನೆ ಪ್ರಾಮಾಣಿಕತನ ಮರೆಮಾಚಿತ್ತು. ನಾವು ಕೂಡಾ‌ಅಹಾಯಕರಾಗಿ ಕುಳಿತೆವು. ಮೊನ್ನೆ ಮಾಧ್ಯಮದಲ್ಲಿ ಮೇ. 25 ರಿಂದ ಪ್ರಚಾರವಾಗಿದೆ. ಇದು ಹಸಿರು ಟವೆಲ್ ತೊಟ್ಟು ಓಡಾಡುವರಿಗೆ ಬೇಸರ ತಂದಿದೆ ಎಂದರು.

ಕೋಡಿ ಹಳ್ಳಿ ಚಂದ್ರಶೇಖರ್ ಗೆ ಮೊಬೈಲ್ ಕರೆ ಮಾಡಿದ್ದೆ ಫೊನ್ ಗೆ ಉತ್ತರಿಸಲಿಲ್ಲ. ವಾಟ್ಸಪ್ ನಲ್ಲಿ ಸಂಘಟನೆ ಸಭೆ ಕರೆಯಲಾಗುತ್ತದೆ. ನಾನು ವಾಟ್ಸಪ್ ನಲ್ಲಿ ಸಭೆಗೆ ಹೋಗದಂತೆ ತಿಳಿಸಲಾಗಿತ್ತು. ಪವರ್ ಟಿವಿಯಲ್ಲಿ ಬಿತ್ತರವಾದ ಸುದ್ದಿಯನ್ನ ಒಂದೇ ಒಂದು ಅಂಶ‌ಅಲ್ಲಗೆಳೆಯಲಿಲ್ಲ. ಸುದ್ದಿಯಲ್ಲಿ ಬಂದ ಧ್ವನಿ ನನ್ನದಲ್ಲವೆಂದು ಕೋಡಿಹಳ್ಳಿ ಸ್ಪಷ್ಟಪಡಿಸಲಿಲ್ಲ.

ನಮ್ಮ‌ಮನೆಗೆ 7-8 ತಿಂಗಳು ಮನೆಗೆಬಂದು ಅವರು ಊಟ‌ಮಾಡಿದ್ದಾರೆ. ಪವರ್ ಟಿವಿ ಸಹವಾಸ ಸಾಕು ಎನ್ನುತ್ತಾರೆ. ಸಹವಾಸ ಸಾಕು ಎಂದರೆ ಏನು? ಈ ಕಿಕ್ ಬ್ಯಾಕ್ ನ್ನ ಒಪ್ಪಿಕೊಂಡಂತೆನಾ ಎಂದು ಪ್ರಶ್ನಿಸಿದರು. ಹಣದ ವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಸಂಪೂರ್ಣ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಕೋಡಿಹಳ್ಳಿ ಚಂದ್ರ ಶೇಖರ್ ಕರೆದ ಸುದ್ದಿಗೋಷ್ಠಿಯಲ್ಲಿ ಪತ್ರಿಕೆಯ ಮೇಲೆ ಕೇಸ್ ಹಾಕುತ್ತೇನೆ ಎಂದು ಸ್ಪಷ್ಟಪಡಿಸಲಿಲ್ಲ. ಈಗ ಕೋಡಿಹಳ್ಳಿ ಚಂದ್ರಶೇಖರ್ ಆಪ್ ಪಕ್ಷಕ್ಕೆ ಸೇರುತ್ತಿರುವ ಹಿನ್ನಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಅದಕ್ಕೂ ಮೊದಲು ಕೋಡಿಹಳ್ಳಿ ಚಂದ್ರಶೇಖರು ರಾಜ್ಯ ರೈತ ಸಂಘಕ್ಕೆ ರಾಜೀನಾಮೆ ನೀಡಬೇಕಿತ್ತು. ಈ ಪ್ರಕರಣದ ವಿರುದ್ಧ ಮೊಕದ್ದಮೆ ಹಾಕಬೇಕಿತ್ತು. ನನ್ನಂತಹವನು ಅವರಸ್ಥಾನದಲ್ಲಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಎಂದು‌ ನೂತನವಾಗಿ ಆಯ್ಕೆ ಆದ ಹೆಚ್ ಆರ್ ಬಸವರಾಜ್ ಭಾವಾತ್ಮಕವಾಗಿ ಹೇಳಿದರು.

ರಾಜ್ಯ ಸಂಘದಿಂದ ತೆಗೆದುಹಾಕಲಾಗಿದೆ. ಸಿಎಂಎನ್ ಡೆವೆಲಪರ್ಸ್ ಎಂದು ರಿಜಿಸ್ಟರ್ ಮಾಡಲಾಗಿದೆ ರಾಜ್ಯ ಸಂಘದಗಮನಕ್ಕೆ ಬಂದಿಲ್ಲ. ಇದಕ್ಕೆ ಸಂಘದ್ದೂ ಅಭ್ಯಂತರವಿಲ್ಲ. ಆದತೆ ಹಸಿರು ಶಾಲಿನ ಹಿಂದೆ ರಿಯಲ್ ಎಸ್ಟೇಟ್ ಮಾಡಲು ಅವಕಾಶವಿಲ್ಲ. ಸತ್ಯ ಶೋಧನ ಸಮಿತಿಯನ್ನ ಆಯ್ಕೆ ಮಾಡಲಾಗಿದೆ. ಇದಕ್ಕೆ ಎರಡು ತಿಂಗಳ ಒಳಗೆ ವರದಿ ನೀಡಲು ಸೂಚಿಸಲಾಗಿದೆ. ಅಧ್ಯಕ್ಷರನ್ನ ತಕಗಷಣಕ್ಕೆ ನೇಮಿಸಲಾಗಿದೆ ಎಂದರು.

ಇನ್ನುಮುಂದೆ ರಾಜ್ಯದ್ಯಕ್ಷರ ಭಾವಚಿತ್ರಗಳಿರೊಲ್ಲ

ಕೋಡಿ ಹಳ್ಳಿ ಚಂದ್ರಶೇಖರ್ ಇರುವವರೆಗೂ ಅವರದೇ ಭಾವಚಿತ್ರ ರಾಜ್ಯ ರೈತಸಂಘದಲ್ಲಿತ್ತು. ಇನ್ಮುಂದೆ ರಾಜ್ಯಧ್ಯಕ್ಷರ ಭಾವಚಿತ್ರ ಇರೊಲ್ಲವೆಂದ ನೂತನ ಅಧ್ಯಕ್ಷರು ಸಂಘದ ಸಂಸ್ಥಾಪಕ ಹೆಚ್ ಎಸ್ ರುದ್ರಪ್ಪ, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್ ಸುಂದರೇಶ್, ಕಡಿದಾಳ್ ಶಾಮಣ್ಷ, ಡಾ.ಬಿ.ಎಂ.ಚಿಕ್ಕಸ್ವಾಮಿ ಅವರ ಭಾವಚಿತ್ರಗಳಿರಲಿವೆ ಎಂದರು.

ಹೊಸ ಸಮಿತಿ

ಹೊಸ ರಾಜ್ಯಧ್ಯಕ್ಷರ ಹೆಸರನ್ನ ಘೋಷಿಸಲಾಗಿದೆ. ಹೆಚ್ ಆರ್ ಬಸವರಾಜಪ್ಪ ರಾಜ್ಯಧ್ಯಕ್ಷರಾಗಿದ್ದಾರೆ. ಶಶಿಕಾಂತ್ ಪಡಸಲಗಿ ರಾಜ್ಯ ಗೌರವಾಧ್ಯಕ್ಷರಾಗಿದ್ದಾರೆ. ರಾಜ್ಯ ಖಜಾಂಚಿಯಾಗಿ ಚಿಕ್ಕಸ್ವಾಮಿ,ರಾಜ್ಯ ಕಾರ್ಯಾಧ್ಯಕ್ಷ ಸಿದ್ದವೀರಪ್ಪ, ಕುರುವ ಗಣೇಶ್, ಚುನ್ನಪ್ಪ ಪೂಜಾರಿ ಉಪಾಧಗಯಕ್ಷರಾಗಿ ಅನುಸೂಯ,

ಹೊನ್ನೂರು ಮುನಿಯಪ್ಪ, ತರೀಕೆರೆ ಮಹೇಶ್, ವೆಂಕಟನಾರಾಯಣಪ್ಪ, ಹಿಟ್ಟೂರು ರಾಜು, ಟಿಎಂ ಚಂದ್ರಪ್ಪ, ದುಗ್ಗಪ್ಪ ಗೌಡ, ಶಿವರತ್ನ, ಮುತ್ತಪ್ಪ ಕೊಮಾರ, ನಿಂಗಪ್ಪ ದಿವಟಗಿ, ಬಸವನಗೌಡ ಪಾಟೀಲ್ ಬಿರಾದಾರ್ ಬೈಚೇ ಗೌಡ ಕೋಲಾರ, ರಾಜ್ಯ ಪ್ರಧಾನ ಕಾರ್ಯದರ್ಶಿ,ಅಬ್ಬಣ್ಣಿ ಶಿವಪ್ಪ, ನಜೀರ್ ಸಾಬ್ ಮೂಲಿಮನೆ, ಅಮೀನ್ ಪಾಷ ದಿದ್ಗಿ, ಸುಭಾಷ್ ಸಿರಬೂರು.

ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್, ಗಂಗಾಧರ್, ಮೇಠಿ, ಹೊನ್ನೂರು ಪ್ರಕಾಶ್, ಸುಭಾಷ್ ಐಕೂರು, ಶಿಸ್ತು ಸಮಿತಿಯ ಅಧ್ಯಕ್ಷ ಡಾ.ಬಿ.ಎಂ.ಚಿಕ್ಕಸ್ವಾಮಿ, ಚಿ.ಮ.ಚಿಕ್ಕಸ್ವಾಮಿಯರನ್ನ ಆಯ್ಕೆ ಮಾಡಲಾಗಿದೆ.

ಕೋಡಿಹಳ್ಳಿ ಅಧ್ಯಕ್ಷರಾಗಿದ್ದಾಗ ಹಲವರು ಬರೊಲ್ಲವೆಂದಿದ್ದರು. ಎಲ್ಲಾ ಸಂಘಟನೆಯನ್ನ ಸಂಪರ್ಕಿಸಿ ದು ಮಾತನಾಡುವೆ. ನನಗಿಂತ ಉತ್ತಮವಾದ ವ್ಯಕ್ತಿ ಸಿಕ್ಕರೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಿದ್ದನಿದ್ದೇನೆ ಎಂದು ತಿಳಿಸಿದರು.

ಟಿಕಾಯತ್ ಮೇಲೆ ಹಲ್ಲೆ ಖಂಡನೀಯ

ಟಿಕಾಯತ್ ಹಲ್ಲೆ ಶೋಷಿತ ವರ್ಗದ ಮೇಲೆ ನಡೆದ ಹಲ್ಲೆ. ಟಿಕಾಯತ್ ಆಸೆ ಪಟ್ಟಿದ್ದರೆ ಕೋಟಿ ಕೋಟಿ ಗಳಿಕೆ‌ಮಾಡಬಹುದಿತ್ತು. ನಿನ್ನೆ ನಡೆದ ಕೃತ್ಯ ಖಂಡನೀಯ, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗುತ್ತದೆ. ಸರ್ಕಾರಕ್ಕೆ ಗೌರವ ಬರಬೇಕಾದರೆ ತನಿಖೆ ನಡೆಸಬೇಕು. ರಾಷ್ಟ್ರೀಯ ನಾಯಕರಿಗೆ ಭದ್ರತೆ ನೀಡಲು ಆಗದ ಸರ್ಕಾರ ರಾಜೀನಾಮೆ ನೀಡಬೇಕೆಂದರು.‌

ಈ ಕುರಿತು ಮೆರಣವಣಿಗೆಯಿಂದ ಸಂಘಟನೆಯ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ನೀಡಲಾಗುವುದು ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button