ಸ್ಥಳೀಯ ಸುದ್ದಿಗಳು

ಅವೈಜ್ಞಾನಿಕ ಆಸ್ತಿ ತೆರಿಗೆ ವಿರುದ್ಧ ಕಾಂಗ್ರೆಸ್ ಜಿಲ್ಲಾ‌ ಸಮಿತಿ ಪ್ರತಿಭಟನೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಅವೈಜ್ಞಾನಿಕ ಆಸ್ತಿ ತೆರಿಗೆ, ನೀರಿನ ಕಂದಾಯ ವಿರುದ್ಧ ಕಾಂಗ್ರೆಸ್ ಜಿಲ್ಲಾ ಸಮಿತಿಯು ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಪಾಲಿಕೆ ಎದುರು ಬೃಹತ್ ಪ್ರತಿಭಟನೆ ನಡೆಸಿರು.

ತೊಲಗಲಿ ತೊಲಗಲಿ ಬಿಜೆಪಿ ತೊಲಗಲಿ, ಹಗಲು ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ದಿಕ್ಕಾರ. ನೆರೆ ಸಂತ್ರಸ್ತ್ರರಿಗೆ ಸಮರ್ಪಕ ಪರಿಹಾರ ನೀಡದಿರುವುದು ವಿರುದ್ಧ ಪ್ರತಿಭಟನೆ ನಡೆಸಿದರು.

ಹೆಚ್ ಎಸ್ ಸುಂದರೇಶ ಮಾತನಾಡಿ, ಮಸೀದಿ ಮಂದೀರ ವಿಚಾರ ವಿಚಾರಮಾಡಿಕೊಂಡು ಹೊರಟಿರುವ ಬಿಜೆಪಿ ಜನಹಿತ ಕಾಪಾಡುವಲ್ಲಿ ವಿಫಲವಾಗಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋಲ್ಲವೆಂದು ತಿಳಿಸಿದರ.

ಆಸ್ತಿ ತೆರಿಗೆ ರಾಜ್ಯದಲ್ಲೆ ಇಲ್ಲ ಶಿವಮೊಗ್ಗದಲ್ಲಿ ಜಾರಿಯಾಗಿದೆ. 25 ಸಾವಿರ ಆಸ್ತಿ ತೆರಿಗೆ ಕಟ್ಟುತ್ತಿದ್ದರೆ ಅಂತಹ ಗ್ರಾಹಕರು ಒಂದು‌ಲಕ್ಷ‌ ಕಟ್ಟಬೇಕು. ಎಸ್ ಆರ್ವಾಲ್ಯೂ ಹೆಚ್ಚಾದರೆ ತೆರಿಗೆ ಹೆಚ್ಚಾಗುತ್ತದೆ.

ಮೊದಲು ಇದ್ದ ತೆರಿಗೆ ಜಾರಿಯಾಗಬೇಕು. ಜನ ಹಿತ ಕೆಲಸ ಆಗ್ತಿಲ್ಲ. ಕೂಡಲೇ ತೆರಿಗೆ ಇಳಿಸಬೇಕು. ಕಾಂಗ್ರೆಸ್ಸ ಸರ್ಕಾರ ಅಧಿಕಾರಕ್ಕೆ ಬಂದರೆ ಅವೈಜ್ಞಾನಿಕ ಆಸ್ತಿ ತೆರಿಗೆಯನ್ನ ಸ್ಥಗಿತಗೊಳಿಸಲಿದೆ. ಹಾಗೂ ಪ್ರತಿ ತಿಂಗಳು ಕಟ್ಟುವ ನೀರಿನ ಕಂದಾಯವನ್ನ 120 ರೂ. ಕಟ್ಟುವ ಪದ್ದತಿ ಜಾರಿಗೊಳಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಹೆಚ್ ಪಿ ಯೋಗೀಶ್, ರೇಖಾರಂಗನಾಥ್, ರಮೇಶ್ ಹೆಗ್ಡೆ, ಯುವ ಕಾಂಗ್ರೆಸ್ ನ ಹೆಚ್ ಪಿ ಗಿರೀಶ್, ಪ್ರವೀಣ ಕುಮಾರ್ ಮೊದಲಾದವರು ಉಪಸ್ಥಿರಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button