ಶಿವಮೊಗ್ಗದ ಯುವ ವೈದ್ಯ ಡಾ. ರಾಹುಲ್ ದೇವರಾಜ್ ರವರಿಗೆ ಗೌರವ ಡಾಕ್ಟರೇಟ್ ಹಾಗು ವೈದ್ಯ ಭೂಷಣ ಪ್ರಶಸ್ತಿ
ಚೆನ್ನೈನ ಇಂಡಿಯನ್ ಎಂಪೈರ್ ಯೂನಿವರ್ಸಿಟಿಯಿಂದ ಪ್ರಶಸ್ತಿ

ಸುದ್ದಿಲೈವ್.ಕಾಂ/ಶಿವಮೊಗ್ಗ
ಅನೇಕ ಸೇವೆಗಳನ್ನ ನೀಡಿ ತುರ್ತು ಸಂದರ್ಭದಲ್ಲಿ ಜನರ ಬದುಕನ್ನ ಕಟ್ಟಿಕೊಟ್ಟ ಶಿವಮೊಗ್ಗದ ಯುವ ವೈದ್ಯರಾದ ರಾಹುಲ್ ದೇವರಾಜ್ ಗೆ ಚೆನ್ಬೈನ ಇಂಡಿಯನ್ ಎಂಪೈರ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಹಾಗೂ ವೈದ್ಯ ಭೂಷಣ್ ಪ್ರಶಸ್ತಿ ದೊರೆತಿದೆ.
2018 ರಲ್ಲಿ ಕೊಡಗು ಹಾಗು ಕೇರಳದಲ್ಲಿ ಸಂಭವಿಸಿದ ಭೀಕರ ಭೂಕುಸಿತ ಹಾಗು ಅತಿವೃಷ್ಟಿಯ ಸಂದರ್ಭದಲ್ಲಿ ಸಲ್ಲಿಸಿದ ಡಾ ರಾಹುಲ್ ದೇವರಾಜ್ ಅತ್ಯತ್ತಮ ಸೇವೆ ಸಲ್ಲಿಸಿದ್ದರು.
2020 ರಲ್ಲಿ ಕಾಣಿಸಿಕೊಂಡ ಭೀಕರ ಕೋವಿಡ್ ಮೊದಲನೆ ಅಲೆಯಲ್ಲಿ ರೋಗಿಗಳ ಖಿನ್ನತೆ ದೂರ ಮಾಡಲು ಗಿಟಾರ್ ನೊಂದಿಗೆ ಹಾಡಿ ಮ್ಯೂಸಿಕ್ ಥೆರಪಿ ನೀಡಿದ ವಿಶ್ವದ ಮೊದಲ ವೈದ್ಯ ಎಂಬ ಹೆಗ್ಗಳಿಕೆಗೆ ಗುರಿಯಾಗಿದ್ದರು.
ಹಾರ್ವರ್ಡ್ ನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ್ದ ಹಾಗು ಸುಮಾರು ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಿದ,
ಹಾಗು ದೇಹದಾಡ್ಯ ,ಸಂಗೀತ ,ನಟನೆ , ರಚನೆ, ಯುವ ಸಬಲೀಕರಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಗುರುತಿಸಿದ ಚೆನೈ ನ Indian Empire University ಇವರಿಗೆ ಗೌರವ ಡಾಕ್ಟರೇಟ್ ಪದವಿ ಹಾಗು ವೈದ್ಯ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ …
