ಪೆಟ್ರೋಲ್ ಮತ್ತು ಡಿಸೇಲ್ ಗಾಗಿ ಕ್ಯಾನ್ ಹಿಡಿದುಕೊಂಡು ಬಂದ ಜನ!


ಸುದ್ದಿಲೈವ್.ಕಾಂ/ಶಿವಮೊಗ್ಗ
ನಗರ ವ್ಯಾಪ್ತಿಯಿರುವ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಜನವೋ ಜನ. ಸರದಿ ಸಾಲುಗಳಲ್ಲಿ ನಿಂತು ಕ್ಯಾನ್ ಗಳಿಗೆ ಪೆಟ್ರೋಲ್ ಮತ್ತು ಡಿಸೇಲ್ ತುಂಬಿಸಿಕೊಳ್ತಾ ಇರುವ ದೃಶ್ಯಗಳು ಲಭ್ಯವಾಗುತ್ತಿದೆ.
ನಾಳೆ ಪೆಟ್ರೋಲ್ ಬಂಕ್ ಮಾಲೀಕರು ಪೆಟ್ರೋಲ್ ಮತ್ತು ಡಿಸೇಲ್ ದರಗಳನ್ನ ದಿಡೀರನೇ ಇಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಲಕ್ಷಾಂತರ ರೂ ನಷ್ಟವಾಗುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದರ ಜೊತೆ ಕಮಿಷನ್ ಏರಿಸಬೇಕು ಎಂಬ ಬೇಡಿಕೆಯೂ ಸೇರಿದಂತೆ ಇತರೆ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ.
ನಾಳೆ ಪೆಟ್ರೋಲ್ ಬಂಕ್ ಗಳು ಒಪನ್ ಮಾಡೋದು ಕಷ್ಟವಾಗಿದೆ. ಭೀತಿಗೆ ಬಿದ್ದ ಜನ ಕ್ಯಾನ್ ಗಳನ್ನ ಹಿಡಿದುಕೊಂಡು ಬಂದು ತೈಲಗಳನ್ನ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಸಾಗರ ರಸ್ತೆಯಲ್ಲಿರುವ ಭಾರ್ಗವಿ ಪೆಟ್ರೋಲ್ ಬಂಕ್ ನಲ್ಲಿ ಹೆವನ್ ಇನ್ ಬಾರ್ ಅಂಡ್ ರೆಸ್ಟೋರೆಂಟ್ ನಿಂದ ಕ್ಯೂ ಆರಂಭಾಗಿದೆ.
ಒಟ್ಟಿನಲ್ಲಿ ಭಯಕ್ಕೆ ಬಿದ್ದ ಜನ ರಾತ್ರಿ 10-50 ಆದರೂ ಸರದಿ ಸಾಲು ಕಡಿಮೆಯಾಗುವ ಲಕ್ಷಣ ಕಾಣ್ತಾ ಇಲ್ಲ.
