ಜೋರಾಗಿ ಮಾತನಾಡಬೇಡಿ ಎಂದಿದ್ದಕ್ಕೆ ಇಬ್ಬರ ನಡುವೆ ವಾಗ್ಯುದ್ಧ-ಬಿಯರ್ ಬಾಟಲಿಯಿಂದ ಹಲ್ಲೆ!

ಸುದ್ದಿಲೈವ್.ಕಾಂ/ಶಿವಮೊಗ್ಗ
ಅಂಗಡಿ ಮುಂದೆ ಜೋರಾಗಿ ಮಾತನಾಡಿ ಬೇಡಿ ಎಂದಿದ್ದಕ್ಕೆ ಮಾತಿಗೆ ಮಾತು ಬೆಳೆದು ಬಿಯರ್ ಬಾಟಲ್ ನಿಂದ ದಾಳಿ ನಡೆಸಿರುವ ಘಟನೆ ನಡೆದಿದೆ. ಈ ಪ್ರಕರಣ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬಾಟಲಿಯಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನ ನೋಡಿಕೊಂಡು ಬರುತ್ತಿದ್ದ ಓರ್ವ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ.
ಈ ಎರಡೂ ಪ್ರಕರಣಗಳು ಒಂದೇ ಆಗಿದ್ದರೂ, ಎರಡು ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿನೋಬ ನಗರದ ಎಪಿಎಂಸಿ ತರಕಾರಿಮಂಡಿ ಇರುವ ಬಾರ್ ಒಂದರ ಮುಂದೆ, ಫುಟ್ ಪಾತ್ ಮೇಲೆ ನಿಂತುಕೊಂಡ ಕಿಂಡರ್ ಶಾಲೆಯ ಸೆಕ್ರೇಟರಿ ಕಾರ್ತಿಕ್, ರಘು ಮತ್ತು ಬಾಲೇಶ್ ಮೂವರು ಜಿಯೋ ವಿಷಯದ ಕುರಿತಂತೆ ಮಾತನಾಡುತ್ತಿದ್ದಾಗ ಬಾರ್ ನ ಶ್ರೀನಿವಾಸ್ ಎಂಬಾತ ಜೋರಾಗಿ ಮಾತನಾಡಬೇಡಿ ಎಂದಿದ್ದಾರೆ.
ಈ ಜಾಗ ನಿಮ್ಮಪ್ಪನಿಗೆ ಸಂಬಂಧ ಪಟ್ಟ ಜಾಗನಾ ಎಂದು ಕಾರ್ಯಿಕ್ ತಿರುಗೇಟು ನೀಡಿದ್ದಾರೆ. ಇದು ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಶ್ರೀನಿವಾಸ್ ಕಾರ್ತಿಕ್ ಮತ್ತು ತಂಡವನ್ನ ಅವ್ಯಾಚ್ಯ ಶಬ್ದಗಳಿಂದ ಬೈದು ಒಳಗೆ ಹೊಗಿದ್ದಾರೆ. ಒಳಗೆ ಹೋದ ಶ್ರೀನಿವಾಸ್ ಐದು ನಿಮಿಷದಲ್ಲಿ ಓರ್ವನನ್ನ ಕರೆದುಕೊಂಡು ಬಂದು ಬಿಯರ್ ಬಾಟಲಿನಿಂದ ದಾಳಿ ನಡೆಸಿದ್ದಾರೆ.
ಈ ವೇಳೆ ಕಾರ್ತಿಕ್ ಕೆಳಗೆ ಬಿದ್ದಿದ್ದಾರೆ. ಶ್ರೀನಿವಾಸ್ ಜೊತೆಗಿದ್ದವರು ಕಾಲಿನಿಂದ ತುಳಿದಿದ್ದಾರೆ. ಈ ವೇಳೆ ಸ್ಥಳೀಯರು ಮತ್ತು ಕಾರ್ತಿಕ್ ಜೊತೆ ಇದ್ದ ಬಾಲೇಶ್ ಮತ್ತು ರಘು ಜಗಳ ಬಿಡಿಸಿ ಮೆಗ್ಗಾನ್ ಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೇ ಪ್ರಕರಣ ಇಲ್ಲಿಗೆ ಮುಗಿದುಹೋಗಿದ್ದರೆ ಇಲ್ಲಿಗೆ ಕಥೆ ಮುಗಿದು ಹೋಗಿ ಬಿಡುತ್ತಿತ್ತು. ಆದರೆ ಈ ಘಟನೆ ಮುಂದುವರೆದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೆಗ್ಗಾನ್ ಆಸ್ಪತ್ರೆಗೆ ಬಂದ ಕಾರ್ತಿಕ್ ಗೆ ತಲೆಗೆಗಾಯವಾಗಿದೆ. ಚಿಕಿತ್ಸೆ ಕೊಡಿಸಿ ನಂತರ ರಘು,ಕಾರ್ತಿಕ್ ಮತ್ತು ಬಾಲೇಶ್ ಕಾರಿನಿಲ್ಲಿ ಹೋಗಿದ್ದಾರೆ. ಇವರಜೊತೆ ಬಂದ ಚರಣ್ಜೆ ಶೆಟ್ಟಿ ಮತ್ತು ಆಕಾಸ್ ರಾತ್ರಿ 11 ಗಂಟೆಗೆ ಶರಾವತಿ ನಗರದ ಸ್ಮಶಾನದ ಮುಂದೆಬರುವ ವೇಳೆ ಬೈಕ್ ನಲ್ಲಿ ಬಂದ ನಾಲ್ವರು ಅಡ್ಡಕಟ್ಟಿದ್ದಾರೆ.
ಬಾರ್ ಬಳಿ ಬಂದು ಗಲಾಟೆ ನಡೆಸುತ್ತೀರಾ ಎಂದು ನಾಲ್ವರು ಪ್ರಶ್ನಿಸಿದ್ದು, ಇದರಲ್ಲಿ ಮಧು ಎಂಬಾತ ಚರಣ್ ಶೆಟ್ಟಿ ಮತ್ತು ಅಶೋಕ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಚರಣ್ ಮಧು ಬೀಸಿದ ಮಚ್ಚಿನಿಂದ ತಪ್ಪಿಸಿಕೊಳ್ಳಲು ಕೈ ತಡೆಯೊಡ್ಡಿದ್ದಾನೆ.
ಇದಕ್ಕೆ ಚರಣ್ ನ ಐದು ಬೆರಳುಗಳು ಗಾಯಗೊಂಡಿದೆ. ಬಚಾವ್ ಆಗಲು ವಿನೋಬ ನಗರ ಪೊಲೀಸ್ ಠಾಣೆಗೆ ಓಡಿದ್ದಾರೆ. ನಂತರ ರಘು,ಕಾರ್ತಿಕ್,ಬಾಲೇಶ್ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಆಟಣೆಯಲ್ಲಿ ಮಧು ಮತ್ತು ಇತರೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
