ಕ್ರೈಂ

ಪಾಲಿಕೆ ಕಂಪ್ಯೂಟರ್ ಆಪರೇಟರ್ ವಿಜಯ್ ಎಸಿಬಿ ಬಲೆಗೆ!

IMG-20220530-WA0289

ಸುದ್ದಿಲೈವ್. ಕಾಂ/ಶಿವಮೊಗ್ಗ

ಶಿವಮೊಗ್ಗದ ಮಹಾನಗರ ಪಾಲಿಕೆ ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾನೆ. ಕಟ್ಟಡ ಪರವಾನಗೆ ನವೀಕರಣಕ್ಕೆ ಹಣದ ಬೇಡಿಕೆ ಇಟ್ಟಿದ್ದ ಹಿನ್ನಲೆಯಲ್ಲಿ ದಾಳಿ ನಡೆದಿದೆ.

ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕಂಪ್ಯೂಟರ್ ಆಪರೇಟರ್ ವಿಜಯ್ ಸಿಕ್ಕಿಬಿದ್ದಿದ್ದು ಕುವೆಂಪುರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ದಾಳಿ ನಡೆದಿದೆ. ಎಸಿಬಿ ಶಿವಮೊಗ್ಗ ಡಿವೈಎಸ್​ಪಿ ಲೋಕೇಶ್​ ನೇತೇತ್ವದಲ್ಲಿ ನಡೆದ ದಾಳಿ ನಡೆದಿದೆ.

ಜ್ಯೂನಿಯರ್​ ಇಂಜಿನಿಯರ್​ ಪರವಾಗಿ, ಹಣ ಪಡೆದುಕೊಳ್ಳುತ್ತಿದ್ದ ಆರೋಪ ಬಂದಿದ್ದು, ಈತ ಹೊರಗುತ್ತಿಗೆ ನೌಕರನೆಂದು ತಿಳಿದುಬಂದಿದೆ.

ಗೋಪಾಳದ ವೈದ್ಯರೊಬ್ವರ ಕಟ್ಟಡಕ್ಕೆ ಎರಡು ವರ್ಷ ಮುಗಿದ್ದಿದ್ದು 70% ಕೆಲಸ ಮುಗಿದಿತ್ತು. ಇನ್ನು 30% ಬಾಕಿ ಉಳಿದಿದ್ದು ಇದಕ್ಕೆ ಒಂದು ವರ್ಷ  ಲೈಸೆನ್ಸ್​ ನವೀಕರಣಕ್ಕೆ​ ಗಾಗಿ 10000 ರೂ. ಗೆ ಬೇಡಿಕೆ ಇಡಲಾಗಿತ್ತು.ಇಂದು 6 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಎಸಿಬಿ ಟೀಂ ದಾಳಿ ನಡೆಸಿದೆ.

ವಿನೋಬನಗರದ ವ್ಯಕ್ತಿಯೊಬ್ಬರ ದೂರು ಆಧರಿಸಿ, ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳು.ವಿಜಯ್ ಮತ್ತು ಎಇಇ ಜಯಶೀಲರನ್ನೂ ವಶಕ್ಕೆ ಪಡೆದುಕೊಂಡು ಎಸಿಬಿ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button