ಉದ್ಯೋಗವಾರ್ತೆ

ಯುಪಿಎಸ್ ಸಿ ಪರೀಕ್ಷೆಯಲ್ಲಿ 641 ನೇ ರ್ಯಾಂಕ್ ಪಡೆದ ಶಿವಮೊಗ್ಗದ ಡಾ ಪ್ರಶಾಂತ್ ಕುಮಾರ್!

ಸುದ್ದಿಲೈವ್.ಕಾಂ/ಶಿವಮೊಗ್ಗ

ಕೇಂದ್ರ ಲೋಕಸೇವ ಆಯೋಗ-ಯುಪಿಎಸ್ ಸಿ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು 641 ನೇ ಅಭ್ಯರ್ಥಿಯಾಗಿ ಶಿವಮೊಗ್ಗದ ಡಾ.ಪ್ರಶಾಂತ್ ಕುಮಾರ್ ಬಿ.ಒ ಆಯ್ಕೆಯಾಗಿದ್ದಾರೆ.

ಒಟ್ಟು 685 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.ಈ ಬಾರಿ ಶ್ರುತಿ ಶರ್ಮಾ ಯುಪಿಎಸ್ ಸಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಅಂಕಿತಾ ಅಗರ್ವಾಲ್ 2ನೇ ರ್ಯಾಂಕ್, ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಪರೀಕ್ಷೆಯಲ್ಲಿ ಕರ್ನಾಟಕದ 25 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅವಿನಾಶ್ ಬಿ 31ನೇ ರ್ಯಾಂಕ್, ಬೆನಕ ಪ್ರಸಾದ್ ಎನ್ ಜಿ 92ನೇ ರ್ಯಾಂಕ್, ಮೆಲ್ವಿನ್ ವರ್ಗಿಸ್ 118 ರ್ಯಾಂಕ್, ನಿಕಿಲ್ ಬಸವರಾಜ್ ಪಾಟೀಲ್ 139ನೇ ರ್ಯಾಂಕ್, ವಿನಯ್ ಕುಮಾರ್ 151ನೇ ರ್ಯಾಂಕ್, ಚಿತ್ರರಂಜನ್ ಎಸ್ 155ನೇ ರ್ಯಾಂಕ್, ಅಪೂರ್ವ ಬಾಸುರ್ 191ನೇ ರ್ಯಾಂಕ್, ಮನೋಜ್ ಆರ್ ಹೆಗ್ಡೆ 213ನೇ ರ್ಯಾಂಕ್,

ಮಂಜುನಾಥ್ ಆರ್ 219ನೇ ರ್ಯಾಂಕ್, ರಾಜೇಶ್ ಪೊನ್ನಪ್ಪ 222ನೇ ರ್ಯಾಂಕ್, ಕಲ್ಪಶ್ರೀ ಕೆ ಆರ್ 219ನೇರ್ಯಾಂಕ್, ಹರ್ಷವರ್ಧನ್ 318ನೇ ರ್ಯಾಂಕ್, ಗಜಾನನ ಬಾಲೆ 319ನೇ ರ್ಯಾಂಕ್, ಎಂಡಿ ಖಮರುದ್ದೀನ್ ಖಾನ್ 414, ಮೇಘನಾ ಕೆ.ಟಿ.425 ಹಾಗೂ ಶಿವಮೊಗ್ಗದ 641 ನೇ ರ್ಯಾಂಕ್ ನಲ್ಲಿ ಶಿವಮೊಗ್ಗದ ಡಾ.ಪ್ರಶಾಂತ್ ಕುಮಾರ್ ಬಿ.ಒ ತೇರ್ಗಡೆಯಾಗಿದ್ದಾರೆ.

ಡಾ.ಪ್ರಶಾಂತ್ ಬಿ.ಒ ಶಿವಮೊಗ್ಗದ ವಿನೋಬ ನಗರದ ನಿವಾಸಿಯಾಗಿದ್ದು ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿಯನ್ನ ಮುಗಿಸಿದ್ದಾರೆ. 2020 ರಲ್ಲಿ ಪದವಿ ಪಡೆದುಕೊಂಡ ಡಾ.ಪ್ರಶಾಂತ್ ಯುಪಿಎಸ್ ಸಿ ಯ ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ.

ಇವರ ತಂದೆ ಓಂಕಾರಪ್ಪ ಶಿವಮೊಗ್ಗದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ರೇಖಾ‌.ಜೆ ಆಗಿದ್ದು ಇಬ್ಬರೂ ಮಗನ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button