ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸ್ಥಳೀಯರ ಆಗ್ರಹ

ಸುದ್ದಿಲೈವ್.ಕಾಂ/ಶಿವಮೊಗ್ಗ
ಸ್ಮಾರ್ಟ್ ಸಿಟಿಯ ಅವಾಂತರ ಮತ್ತೊಂದೆಡೆ ಪ್ರಕಟವಾಗಿದೆ. ಕೋಟೆ ರಸ್ತೆಯಲ್ಲಿರುವ ಯುವಕರ ಬಳಗದ ಕುಡಿಯುವ ನೀರಿನ ಟ್ಯಾಂಕ್ ಬಳಿ ಅಳವಡಿಸಿರುವ ವಿದ್ಯುತ್ ದೀಪ ಕಂಬಗಳು ಶಾರ್ಟ್ ಆಗಿ ಹಸುವೊಂದಕ್ಕೆ ಶಾಕ್ ಹೊಡೆದಿದೆ.
ವಿದ್ಯುತ್ ದೀಪದ ಬಳಿ ನೀರು ಕುಡಿಯಲು ಹೋಗಿದ್ದ ಬೀದಿ ಹಸುವಿಗೆ ಶಾಕ್ ಹೊಡೆದಿದೆ. ಚಂಗ್ ಅಂತ ಹಾರಿ ಹಸು ಸಧ್ಯಕ್ಕೆ ಪ್ರಾಣಾಪಾಯದಿಂದ ಓಡಿಬಂದಿದೆ. ಇಲ್ಲಿ ಸ್ಲಾರ್ಟ್ ಸಿಟಿಯ ಕಾಮಗಾರಿ ಪೂರ್ಣಗೊಂಡಿದೆ. ಪೂರ್ಣಗೊಂಡು ಮೆಸ್ಕಾಂ ನವರು ಚಂದ ಕಾಣಲಿ ಎಂದು ವಿದ್ಯುತ್ ದೀಪಗಳನ್ನ ಅಳವಡಿಸಿದ್ದಾರೆ.
ಆದರೆ ಈ ದೀಪದಲ್ಲಿ ವಿದ್ಯುತ್ ಹರಿದು ಕಂಬ ಮುಟ್ಟಿದರೆ ಸಾಕು ಶಾಕ್ ಹೊಡೆಯುವಂತಾಗಿದೆ. ಹಸು ಮುಟ್ಟಿದ್ದಕ್ಕೆ. ಶಾಕ್ ಹೊಡೆದಿದೆ. ರಾತ್ರಿ ಹೊತ್ತಾದರಿಂದ ಅದರಲ್ಲೂ ಅಲ್ಲಿ ನಿವಾಸಿಗಳಾದ ರಾಜು ಮತ್ತು ದೇವಸ್ಥಾನದ ಅರ್ಚಕರು ನೋಡಿ ಟೆಸ್ಟರ್ ಮೂಲಕ ಪರೀಕ್ಷಿಸಿದಾಗ ವಿದ್ಯುತ್ ಪ್ರಸಾರವಾಗುತ್ತಿರುವುದು ತಿಳಿದು ಬಂದಿದೆ. ತಕ್ಷಣವೇ ಮೆಸ್ಕಾಂ ಅಧಿಕಾರಿಗಳಿಗೆ ವಿಷಯ ಮುಟ್ಟಿಸಲಾಗಿದೆ. ಮೆಸ್ಕಾಂ ಸಿಬ್ಬಂದಿಗಳು ಬಂದು ಸಮಸ್ಯೆ ಬಗೆ ಹರಿಸಿದ್ದಾರೆ.
ಒಂದು ವೇಳೆ ಹಗಲಿನಲ್ಲಿ ಮಕ್ಕಳು ಬಂದು ಕಂಬ ಮುಟ್ಟಿದ್ದರೆ ಏನು ಗತಿ? ಅವಘಡ ಸಂಭವಿಸಿದರೆ ಯಾರು ಜವಬ್ದಾರರು? ಈ ಜವಾಬು ಗಳಿಗೆ ಉತ್ತರಿಸುವವರು ಯಾರ? ಹಾಗಾಗಿ ಇವರ ವಿರುದ್ಧ ಸುಮೀಟೋ ಪ್ರಕರಣ ದಾಖಲಿಸಬೇಕೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
