ತಾಲ್ಲೂಕು ಸುದ್ದಿ
ಸಾಗರದ ಕೆಲ ಬಡಾವಣೆಯಲ್ಲಿ ಎರಡು ದಿನ ನೀರು ಇರೊಲ್ಲ!

ಸುದ್ದಿಲೈವ್. ಕಾಂ/ಸಾಗರ
ಸಾಗರದ ಅಂಬುಗಳಲೆಯಲ್ಲಿ 11 ಕೆವಿಎ ಪ್ಯಾನೆಲ್ ಗಳಲ್ಲಿ ಬದಲಾವಣೆ ಕಾಮಗಾರಿ ನಡೆಯುತ್ತಿದ್ದರಿಂದ ಎರಡು ದಿನಗಳು ವಿದ್ಯುತ್ ಶಟ್ ಡೌನ್ ಮಾಡುತ್ತಿರುವುದರಿಂದ ಕೆಲ ಬಡಾವಣೆಗಳಲ್ಲಿ ನೀರು ಸರಬರಾಜು ಇರುವುದಿಲ್ಲ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಾಗರದ ನಗರ ಸಭೆ ಅಧಿಕಾರಿಗಳು, ಜೂ.01 ಮತ್ತು ಜೂ.2 ರಂದು ಅಂಬುಗಳಲೆ ಜಾಕ್ ವೆಲ್ ನಲ್ಲಿ 11 ಕೆವಿಎ ಪ್ಯಾನೆಲ್ ಗಳಲ್ಲಿ ಬದಲಾವಣೆ ಕಾಮಗಾರಿ ನಿಮಿತ್ತವಿದ್ಯುತ್ ಶಟ್ ಡೌನ್ ಮಾಡಲಾಗುತ್ತಿರುವುದರಿಂದ
ಈ ಎರಡೂ ದಿನ ನೀರು ಸರಬರಾಜುವಾಗುತ್ತಿಲ್ಲ. ಲೋಹೀಯಾ ನಗರ, ವಿನೋಬ ನಗರ, ಜೋಸೆಫ್ ನಗರ, ನೆಹರೂ ನಗರ, ಜನ್ನತ್ ಗಲ್ಲಿ, ಎಸ್ ಎಸ್ ನಗರ, ಬೀಡಿ ಕ್ವಾಟ್ರಸ್ ಮತ್ತು ಪುಕ್ಕಟ್ ನಗರಗಳಲ್ಲಿ ನೀರು ಸರಬರಾಹು ಆಗುತ್ತಿಲ್ಲ.
ಸಾರ್ವಜನಿಕರು ಈ ಎರಡು ದಿನಗಳ ಮೊದಲೇ ಒಂದು ದಿನ ಕುಡಿಯುವ ನೀರನ್ನ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಪೌರಾಯುಕ್ತ ರಾಜು ಡಿ ಬಣಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
