ಸ್ಥಳೀಯ ಸುದ್ದಿಗಳು

ಶಾಹೀ ಗಾರ್ಮೆಂಟ್ಸ್ ಅಧಿಕಾರಿಗಳಿಗೆ ದಿಗ್ಭಂಧನ!

IMG_20220530_125724ಸುದ್ದಿಲೈವ್.ಕಾಂ/ಶಿವಮೊಗ್ಗ

ಶಾಹೀಗಾರ್ಮೆಂಟ್ಸ್ ವಿರುದ್ಧ ದುಮ್ಮಳ್ಳಿ ರೈತರು ಗರಂ ಆಗಿದ್ದಾರೆ. ಸ್ಥಳಕ್ಕೆ ಕರೆಯಿಸಿ ಗಾರ್ಮೆಂಟ್ಸ್ ನ ಮೂವರು ಅಧಿಕಾರಿಗಳನ್ನ ದಿಗ್ಬಂಧನ ಹಾಕಿದ್ದಾರೆ.. ಬೆಳಗ್ಗಿನಿಂದ ಎಲ್ಲೂ ಹೋಗಲು ಬಿಡದೆ ಗ್ರಾಮದ ಸೇವಾಲಾಲ್ ಮರಿಯಮ್ಮ ದೇವಸ್ಥಾನದಲ್ಲಿ ಕೂರಿಸಿದ್ದಾರೆ.

ಕಾರ್ಖಾನೆಯ ಹತ್ತಿರ ಇರುವ ಉಚ್ಚಂಗಿ ಕೆರೆಗೆ ಕಲೂಷಿತ ನೀರನ್ನ ಬಿಡಲಾಗಿದ್ದು  ಇದರಿಂದ ದುಮ್ಮಳ್ಳಿಯಲ್ಲಿ ಹರಿಯುವ ಭದ್ರಾ ಚಾನೆಲ್ ನಲ್ಲಿ ಕಲೂಷಿತ ನೀರು ಹರಿದುಬಂದಿದೆ. ಕಲೂಷಿತ ನೀರಿನಿಂದ ಜಾನುವಾರುಗಳು ಸತ್ತಿವೆ. ಅಲ್ಲದೆ ಚಾನೆಲ್ ನಲ್ಲಿ ಇಳಿದರೆ ಮೈಕೈ ಕಡಿತ ಆರಂಭಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಗ್ರಾಮಸ್ಥರು ಶಾಹೀ ಗಾರ್ಮೆಂಟ್ಸ್ ನ ಪಿಆರ್ ಒ ಅಧಿಕಾರಿಗಳಾದ ಸಿದ್ದಲಿಂಗಪ್ಪರನ್ನ ಸ್ಥಳಕ್ಕೆ ಕರೆಯಿಸಿದ್ದಾರೆ. ನಂತರ ಅವರನ್ನ ಮುತ್ತಿಗೆ ಹಾಕಿ ಘೇರಾವ್ ಮಾಡಿದ್ದು, ನಂತರ ಫ್ಯಾಕ್ಟರಿಯ ಇಟಿಪಿ ಅಧಿಕಾರಿ ಸುನೀಲ್ ಜೋಷಿ,ಸಿವಿಲ್ ಇಂಜಿನಿಯರ್ ಶಿವುಕುಮಾರ್ ರನ್ನ ಕರೆಯಿಸಿದ್ದಾರೆ.

ಫ್ಯಾಕ್ಟರಿಯಲ್ಲಿ ಇಟಿಪಿಯಿಂದ ಬಿಡುಗಡೆ ಮಾಡಿದ ನೀರು ಶೋಧಿಸದೆ ಕೆರೆಗೆ ನೀರು ಬಿಡಲಾಗುತ್ತಿದ್ದು ಗ್ರಾಮಗಳಿಗೆ ಚಾನೆಲ್ ಮೂಲಕ ಅದೇ ನೀರು ಹರಿದು ಬರುತ್ತಿದೆ.  ಇದನ್ನ ಶನಿವಾರದೊಳಗೆ ಸರಿ ಮಾಡಿಸಿಕೊಡುವುದಾಗಿ ಪಿಆರ್ ಒ ಸಿದ್ದಲಿಂಗಪ್ಪ ತಿಳಿಸಿದ್ದು ನಂತರ ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ.

ಜೂ.2 ರಂದು ಇಟಿಪಿ ನಿಯಂತ್ರಿತ ಯಂತ್ರ ಹೊಸದನ್ನ ಅಳವಡಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.‌ ಸ್ಥಳಕ್ಕೆ ಮಾಲಿನ್ಯ ಅಧಿಕಾರಿಗಳು ಹರೀಶ್ ತುಂಗನಗರ ಪೊಲೀಸ್ ಠಾಣೆಯ ಪಿಎಸ್ಐ ಶಿವಪ್ರಸಾದ್ ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ.

ಈಸಂದರ್ಭದಲ್ಲಿ ಗ್ರಾಮಸ್ಥರಾದ ಹಾಗೂ ಗ್ರಾಪ?ಸದಸ್ಯ ಆನಂದ್‌ನಾಯ್ಕ, ಕಾಂಗ್ರೆಸ್ ನ ವಿಜಯಕುಮಾರ್,ಗ್ರಾಪ ಅಧ್ಯಕ್ಚ ಹೇಮೇಶ್ ನಾಯ್ಕ, ನೀರುಬಳಕೆದಾರರ ಸಂಘದ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button