ಸುದ್ದಿ

ಡಿಜಿಟಲ್ ರಾಬರಿ ಮಾಡಿದ್ದ ಮೂವರು ಆರೋಪಿಗಳು ಅರೆಸ್ಟ್!

2022-05-30 12-15-27

ಸುದ್ದಿಲೈವ್. ಕಾಂ/ಶಿವಮೊಗ್ಗ

ಮೊನ್ನೆ ಎಎ ಕಾಲೋನಿಯಲ್ಲಿ ಬೈಕ್ ನಲ್ಲಿ ಬರುವಾಗ ಡಿಜಿಟಲ್ ರಾಬರಿ ಮಾಡಿದ್ದ ಮೂವರು ಆರೋಪಿಗಳನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ.

ಫರಗಫೆಕ್ಟ್ ಅಲಾಯ್ಸ್ ನಲ್ಲಿ ಕಾರ್ಮಿಕನಾಗಿದ್ದ ವಿಜಯಕುಮಾರ್ ಎಂಬ ಯುವಕ ಮೈಯ್ಸವಳ್ಳಿಗೆ ಹೋಗುವಾಗ ಎಎ ಕಾಲೋನಿಯಲ್ಲಿ ಮೂವರು ಬೈಕ್ ಅಡ್ಡಕಟ್ಡಿ ಎರಡು ಸಾವಿರ ರೂ ಹಣ ಮತ್ತು ಫೊನ್ ಪೇ ಮೂಲಕ 3000 ರೂ. ಹಣವನ್ನ ವರ್ಗಾಯಿಸಿಕೊಂಡು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿ 24 ಗಂಟೆಯ ಒಳಗೆ ಮೂವರು ಆರೋಪಿಗಳಾದ ಶೋಬಿತ್, ಚಂದನ್ ಸಾಗರ್ ಮತ್ತು ಆಕಾಶ್ ಎಂಬುವರನ್ನ ಬಂಧಿಸಲಾಗಿದೆ.ಮೂವರಿಂದ ಚಿನ್ನದ ಸರ ಮತ್ತು ಮತ್ತು ಹಣವನ್ನ ವಾಪಾಸ್ ಪಡೆಯಲಾಗಿದೆ.

ಮೂವರು ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಇದರಲ್ಲಿ ಈ ಮೂವರು ಆರೋಪಿಗಳು ಬಸವನಗುಡಿ ಮತ್ತು ರೈಲ್ವೆ ಕ್ವಾಟ್ರಸ್ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button