ಗೃಹಪ್ರವೇಶಕ್ಕೆ ಹೋಗಿ ಬರುವುದರಲ್ಲಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು

ಸುದ್ದಿಲೈವ್.ಕಾಂ/ಶಿವಮೊಗ್ಗ
ಗಡಿಬಿಡಿಯಲ್ಲಿ ಮನೆಗೆ ಬೀಗ ಹಾಕಿರುವುದನ್ನೇ ಮರೆತು ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋದರ ಪರಿಣಾಮ ಭಾರಿ ಬೆಲೆ ತೆತ್ತುವಂತಾಗಿದೆ. ಖದೀಮರ ಕೈಚಳಕದಿಂದ 6,56,000/- ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನ ಕಳೆದುಕೊಳ್ಳುವಂತಾಗಿರುವ ಘಟನೆ ವರದಿಯಾಗಿದೆ.
ಭದ್ರಾವತಿ ತಾಲೂಕು ಹೊಳೆಹೊನ್ನೂರಿನಲ್ಲಿ ಪಿಗ್ಮಿ ಕಲೆಕ್ಷನ್ ಮಾಡಿಕೊಂಡು ಬದುಕು ಸಾಧಿಸಿತ್ತಿದ್ದ ಹರೀಶ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಗಡಿಬಿಡಿಯಲ್ಲಿ ಪಕ್ಕದ ಬೀದಿಯಲ್ಲಿ ಗೃಹಪ್ರವೇಶಕ್ಕೆ ಹೋಗಿದ್ದ ವೇಳೆ ಮನೆಯ ಬಾಗಿಲು ಹಾಕದೆ ಮರೆತು ಹೋಗಿದ್ದಾರೆ.
ಪತ್ನಿ, ಮಕ್ಕಳ ಜೊತೆ ಹೋಗಿದ್ದ ಹರೀಶ್ ಮಧ್ಯಾಹ್ನ 2-30 ಕ್ಕೆ ಮನೆಗೆ ಬಂದು ನೋಡಿದ್ದಾರೆ. ಮನೆಯೊಳಗಿದ್ದ ಬೀರುವಿನಲ್ಲಿದ್ದ 66 ಸಾವಿರ ರೂ.ಮೌಲ್ಯದ 22 ಗ್ರಾಂ ನೆಕ್ಲೇಸ್, 10 ಗ್ರಾಂ ಬಳೆ, 1 ಲಕ್ಷ ರೂ. ಮೌಲ್ಯದ 35 ಗ್ರಾಂ ಮಾಂಗಲ್ಯ ಸರ, 90 ಸಾವಿರ ರೂ. ಮೌಲ್ಯದ ಅವಲಕ್ಕಿ ಸರ
10 ಗ್ರಾಂ ಓಲೆ ಜುಮ್ಕಿ, 8 ಸಾವಿರ ರೂ. ಸೇರಿ ಒಟ್ಟು 216 ಗ್ರಾಂ. ನ ಒಟ್ಟು 6,56,000/- ರೂ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿವೆ.
