ಮನೋರಂಜನೆ

ಯಕ್ಕಸಕ್ಕಾ… ಯಕ್ಕಸಕ್ಕಾ… ಯಕ್ಕಾ‌ಸಕ್ಕಾ ಹಾಡಿಗೆ ಕಮಲಾನೆಹರೂ ಕಾಲೇಜಿನ ಹಳೆಯ ವಿದ್ಯಾರ್ಥಿನಿಯರ ಜಬರ್ದಸ್ತ್ ಸ್ಟೆಪ್ಸ್!

ಸುದ್ದಿಲೈವ್.ಕಾಂ/ಶಿವಮೊಗ್ಗ

ಯಕ್ಕಸಕ್ಕಾ… ಯಕ್ಕಸಕ್ಕಾ… ಯಕ್ಕಾ ಸಕ್ಕ, ಸೊಂಟಾ ಬಳಕುವಾಗ ಉಯ್ಯಾಲೆ ಆಡುವಾಗ .‌ ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ‌ ಹೀಗೆ ಏಳೆಂಟು ಹಾಡಿಗೆ ಕಮಲ ನೆಹರೂ ಕಾಲೇಜಿನ ವಿದ್ಯಾರ್ಥಿನಿಯರು ಹುಚ್ಚೆದ್ದು ಕುಣಿದಿದ್ದಾರೆ.

ಶಿವಮೊಗ್ಗದ ಕಮಲಾ‌ನೆಹರೂ ಕಾಲೇಜಿನಲ್ಲಿ ಇಂದು ಹಳೇ ವಿದ್ಯಾರ್ಥಿನಿಯರ ಸ್ನೇಹಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ನಡೆದಿದೆ. 1965 ರಿಂದ 2020 ರವರೆಗಿನ 17 ಬ್ಯಾಚ್ ನ ವಿದ್ಯಾರ್ಥಿನಿಯರು ನಿರಂತರ ಎಂಬ ಹೆಸರಿನಲ್ಲಿ ಸ್ನೇಹಮಿಲನ ಕಾಲೇಜಿನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ನಡೆದಿದೆ.

ಈ ಕಾಲೇಜಿನ ಹಳೇ ವಿದ್ಯಾರ್ಥಿನಿಯರಾಗಿ ಈಗಾಗಲೇ ವಕೀಲರು, ಬಿಎಸ್ ಎನ್ ಎಲ್, ಶಿಕ್ಷಕಿಯರು, ಅಂಚೆ ಇಲಾಖೆ,ತೆರಿಗೆ ಇಲಾಖೆ ಶಿಕ್ಷಣ ಇಲಾಖೆ, ರೈಲ್ವೆ ಡಿಪಾರ್ಟ್ ಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿನಿಯರು ಇಂದು ಗತಕಾಲದ ಕಾಲೇಜಿನ ವೈಭವವನ್ನ ನೆನೆಪಿಸಿಕೊಂಡು ಹಳೇ ನೆನಪನ್ನ ಹಂಚಿಕೊಂಡಿದ್ದಾರೆ.

ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ಕಾಲೇಜಿನಲ್ಲಿ ಒಟ್ಟಾಗಿ ಸೇರಿ ಸೆಲ್ಫಿ ತೆಗೆದುಕೊಳ್ಳುವ ಮೂಲಕ ತಮ್ಮ ಹಳೆಯ ನೆನಪಿಗೆ ಅದ್ಬುತ ಅನುಭವವನ್ನ ಹೊಂದಿದರು. ಮೊಮ್ನಕ್ಕಳು, ಮಗ ಮಗಳನ್ನ ಹೊಂದಿದ್ದರೂ ಹಳೆಯ ಕಾಲೇಜು ದಿನಗಳನ್ನ ನೆನಪಿಸಿಕೊಂಡು ಅದೇ ದಿನಗಳು ಒಳ್ಳೆಯದು ಎಂದು ನೆನಪಿಸಿಕೊಂಡ ಗಳಿಗೆಯೂ ಈ ಸಮಯ

ಇದೇ ವೇಳೆ ಕಾಲೇಜಿನ 8 ಜನ ಪ್ರಾಂಶುಪಾಲರನ್ನ ಅಭಿನಂದಿಸಲಾಯಿತು. ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಲ್ಲಿದ್ದರೂ ತರಗತಿಗಳಲ್ಲಿ ಕುಳಿತು ಫೊಟೊ ತೆಗೆಸಿಕೊಂಡಿದ್ದು ಒಂದು ಅದ್ಬುತ ಲಕ್ಕಿ ಗರ್ಲ್, ಮ್ಯೂಸಿಕಲ್ ಚೇರ್, ಫನ್ನಿ ಗೇಮ್ಸ್ ಆಡಿಸಲಾಯಿತು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button