ತಾಲ್ಲೂಕು ಸುದ್ದಿ

ಕಣ್ಣುಮುಚ್ಚಿ ಕುಳಿತ ಅರಣ್ಯ ಇಲಾಖೆ,ಗ್ರಾಪಂ-ಏನಿದು ಸ್ಥಳೀಯರ ಆಕ್ರೋಶ?

ಸುದ್ದಿಲೈವ್.ಕಾಂ/ತೀರ್ಥಹಳ್ಳಿ

ಮಂಡಗದ್ದೆ ಅರಣ್ಯ ಇಲಾಖೆಗೆ ಸೇರಿದ ಜಾಗದಿಂದ ತೂದೂರು ಗ್ರಾಮ ಪಂಚಾಯಿತಿಗೆ ಸೇರಿದ ಸರ್ಕಾರಿ ಜಾಗಕ್ಕೆ ಮಣ್ಣು ತುಂಬಿಸಲಾಗುತ್ತಿದ್ದು ಈ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಡಗದ್ದೆಯ ನಂದಗದ್ದೆ ಅರಣ್ಯ ಭೂಮಿ ಸರ್ವೆ ನಂಬರ್ 40/2 ಸಿ ನಿಂದ ಮಣ್ಣು ಎತ್ತಿಕೊಂಡು ಬರಲಾಗುತ್ತಿದ್ದು, ಪಕ್ಕದ ತೂದೂರಿನ ಹೈವೆ ರಸ್ತೆಯ ಪಕ್ಕದಲ್ಲಿರುವ ಸರ್ಕಾರಿ ಸರ್ವೆನಂಬರ್ 97ರಲ್ಲಿ ತುಂಬಲಾಗುತ್ತಿದೆ.

ಒಂದು ಹಿಡಿ ಮಣ್ಣನ್ನ ಅರಣ್ಯ ಭೂಮಿಯಿಂದ ತಂದರೂ ದೂರು ದಾಖಲಿಸುವ ಅರಣ್ಯ ಇಲಾಖೆ ಲಾರಿಗಟ್ಟಲೆ ಮಣ್ಣನ್ನ ತಂದು ಗ್ರಾಮಪಂಚಾಯಿತಿ ಜಾಗದಲ್ಲಿ ತುಂಬಿಸಲಾಗುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

ತೂದೂರಿನ ಈ ಗ್ರಾಮ ಪಂಚಾಯಿತಿ ಜಾಗವು ತುಂಗನದಿಯ ಮುಳುಗಡೆ ಪ್ರದೇಶವಾಗಿದೆ. ಪಕ್ಕದಲ್ಲಿ ಹೈವೆ ಇದೆ. ನದಿಯ ಜಾಗದಿಂದ 3 ಚೈನು ಅಂದರೆ 1 ಚೈನ್ ಗೆ 33 ಅಡಿ ಇದ್ದು ಮೂರು ಚೈನ್ ಎಂದರೆ 100 ಅಡಿ ಆಗಲಿದೆ. ಇದು ನಿಷೇಧಿತ ಪ್ರದೇಶವಾಗಿದ್ದರೂ ಕಾನೂನಿನ ಭಯವಿಲ್ಲದೆ ಖಾಸಗಿ ವ್ಯಕ್ತಿಗಳು ಈ ರೀತಿ ಸರ್ಕಾರಿ ಭೂಮಿಯನ್ನ ಲೂಟಿ ಮಾಡಲು ಹುನ್ನಾರ ಮಾಡುತ್ತಿದ್ದರು ಅರಣ್ಯ ಮತ್ತು ಕಂದಾಯ ಇಲಾಖೆ ಕಣ್ಣುಮುಚ್ಚಿ ಕುಳಿತಿವೆ ಎಂದು ಆರೋಪವೆಸೆಗಿದ್ದಾರೆ.

ಇಲ್ಲಿ ಪಕ್ಷಿಗಳು ಬರುವ ಜಾಗವಾಗಿದೆ. ಆದರೆ ಸರ್ಕಾರಿ ಜಾಗವನ್ನ ಮಣ್ಣೇರಿಸುವ ಮೂಲಕ ಒತ್ತುವರಿ ಮಾಡಿಕೊಳ್ಳುವ ಉದ್ದೇಶವೂ ಇದೆ. ಅರಣ್ಯ ಭೂಮಿಯಿಂದ‌ ಮಣ್ಣು ತೆಗೆಯಲು ಮತ್ತು ಸರ್ಕಾರಿ ಜಾಗದಲ್ಲಿ ಮಣ್ಣು ತುಂಬಿಸಲು ಅನುಮತಿ ಇಲ್ಲದಿದ್ದರೂ ಈ ರೀತಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ. ಕಣ್ಣಿದ್ದೂ ಕಣ್ಣಿಲ್ಲದಂತೆ ಇಲಾಖೆ ವರ್ತಿಸುತ್ತಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button