ಕ್ರೈಂ

ಸರ್ಕಾರಿ ಜಮೀನು ಒತ್ತುವರಿ-ಗ್ರಾಮಾಂತರ ಠಾಣೆಯಲ್ಲಿ ತಹಶೀಲ್ದಾರ್ ರಿಂದ ದೂರು ದಾಖಲು

ಸುದ್ದಿಲೈವ್.ಕಾಂ/ಸಾಗರ

ಸಾಗರದಲ್ಲಿ ಮರಸ ಗ್ರಾಮದಲ್ಲಿ ಖಾನು ಝಾಡಿ ಜಾಗವನ್ನ ವರ್ಗೀಕೃತಗೊಳಿಸಿ ಸರ್ಕಾರಿ ಜಮೀನನ್ನ ಒತ್ತುವರಿ ಮಾಡಿಕೊಂಡ ವ್ಯಕ್ತಿಯ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ರಿಂದ ದೂರು ದಾಖಲಾಗಿದೆ.

ಮರಸ ಗ್ರಾಮದಲ್ಲಿ ಕಸಬಾ ಹೋಬಳಿ ಸರ್ವೆ ನಂಬರ್ 44 ನ್ನ ಖಾನು ಝಾಡಿ ಎಂದು ವರ್ಗೀಕರಿಸಿದ ಸರ್ಕಾರಿ ಜಮೀನಾದ 4 ಎಕರೆ 37 ಗುಂಟೆ ಜಾಗವನ್ನ ಬಿ.ಎಂ.ಮಂಜಪ್ಪ ಬಿನ್ ಬಂಗಾರಪ್ಪನವರು ಅನಧಿಕೃತ ಸಾವಳಿ ಮಾಡಿಕೊಂಡಿದ್ದರು.

ಇವರಿಗೆ ಏ.21 ರಂದು ನೋಟೀಸ್ ನೀಡಿ ಒತ್ತುವರಿಮತ್ತು ಸಾಗುವಳಿಯನ್ನ ಸ್ಥಗಿತಗೊಳಿಸಲು ಸೂಚಿಸಲಾಗಿತ್ತು. ಮೇ.16 ರಂದು ತಿಳುವಳಿಕೆ ಪತ್ರ ನೀಡಿದರೂ ಸಹ ಈ ಜಾಗದಲ್ಲಿ ಅಡಿಕೆ ಸಸಿ ನೆಟ್ಟು ಮಂಜುನಾಥ್ ರವರು ಪ್ರಯತ್ನಿಸಿದ್ದರು.

ಈ ಹಿನ್ನಲೆಯಲ್ಲಿ ಸಾಗರ ತಾಲೂಕು ತಹಶೀಲ್ದಾರ್ ಮಲ್ಲೇಶ್ ಪೂಜಾರ್ ಗ್ರಾಮಾಂತರ ಠಾಣೆಯಲ್ಲಿ ಮಂಜಪ್ಪನವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button