ಮನೋರಂಜನೆ

ನಾಳೆಯಿಂದ ಜೂನ್ 02 ರವೆಗೆ ಪಂಚಾಯತ್ ಕ್ರೀಡಾ ಹಬ್ಬ

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪಂಚಾಯಿತಿ ಸಿಬ್ಬಂದಿಗಳಿಗಾಗಿ ಪಂಚಾಯತ್ ಕ್ರೀಡಾ ಹಬ್ಬವನ್ನ ಹಮ್ಮಿಕೊಳ್ಳಲಾಗಿದೆ. ಎಂಎಲ್ ಸಿ ಡಿ.ಎಸ್.ಅರುಣ್ ಈ ಕಾರ್ಯಕ್ರಮವನ್ನ ಏರ್ಪಡಿಸಿದ್ದು ನಾಳೆಯಿಂದ ಜೂ. 2 ರ ವರೆಗೆ ನಾಲ್ಕು ತಾಲೂಕುಗಳಲ್ಲಿ ನಡೆಯಲಿದೆ.

ಉಳಿದ ಮೂರು ತಾಲೂಕುಗಳಲ್ಲಿ ಸ್ಥಳೀಯ ಶಾಸಕರ ಜೊತೆಗೆ ಚರ್ಚಿಸಿ ಕ್ರೀಡಾ ಹಬ್ಬ ನಡೆಸಲಾಗುವುದು ಎಂದು ಅರುಣ್ ಪತ್ರಿಕಾ‌ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾಳೆ ತೀರ್ಥಹಳ್ಳಿಯ  ಪದವಿ ಪೂರ್ವ ಕಾಲೇಜಿನ ಮೈದಾನ, ಮೇ.30 ರಂದು, ಸಾಗರದಲ್ಲಿರುವ ನೆಹರೂ ಮೈದಾನ, ಮೇ.31 ರಂದು ಭದ್ರಾವತಿ ತಾಲೂಕು ಕಲ್ಲಿಹಾಳ್ ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನ, ಜೂ.2 ರಂದು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಕ್ರೀಡಾ ಹಬ್ಬ ನಡೆಯಲಿದೆ.

ಅದರಂತೆ ಶಿಕಾರಿಪುರ,ಸೊರಬ ಮತ್ತು ಹೊಸನಗರದಲ್ಲಿ ಅಲ್ಲಿನ ಶಾಸಕರೊಂದಿಗೆ ಚರ್ಚಿಸಿ ದಿನಾಂಕ ನಿಗದಿಗೊಳ್ಳಲಿದೆ. ಈ ಕ್ರೀಡೆಗಳು ಗುಂಪು ಕ್ರೀಡೆಗಳು, ವೈಯಕ್ತಿಕ ಕ್ರೀಡೆಗಳು ಮತ್ತು ಮನಜನಾ ಕ್ರೀಡೆಗಳು ಎಂದು ವಿಭಾಗೀಕರಣಗೊಳಿಸಲಾಗಿದೆ. ಗುಂಪು ಮತ್ತು ವೈಯುಕ್ತಿಕ ಕ್ರೀಡೆಗಳಲ್ಲಿ ವಿಜೇತರಾದವರು ಮನರಂಜನಾ ಕ್ರೀಡೆಯಲ್ಲಿ ಭಾಗಿಯಾಗುವಂತಿಲ್ಲ.

ಗುಂಪು ಕ್ರೀಡೆಗಳಲ್ಲಿ ಪುರುಷರಿಗೆ ಕಬ್ಬಡ್ಡಿ, ತ್ರೋಬಾಲ್(ಮಹಿಳೆಯರಿಗೆ), ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, 4×100 ರಿಲೇ ಓಟದ ಸ್ಪರ್ಧೆಗಳು ನಡೆಯಲಿದೆ. ವೈಯುಕ್ತಿಕ ಸ್ಪರ್ಧೆಗಳಲ್ಲಿ ಪುರುಷರಿಗೆ, 200 ಮೀ.ಓಟ, ಮಹಿಳೆಯರಿಗೆ 100 ಮೀ. ಓಟ, ಪುರುಷರಿಗೆ 16 ಪೌಂಡ್ ಗುಂಡು ಎಸೆತ, ಮಹಿಳೆಯರಿಗೆ 8 ಪೌಂಡ್ ಗುಂಡು ಎಸೆತ ಸ್ಪರ್ಧೆಗಳು ನಡೆಯಲಿದೆ.

ಮನರಂಜನಾ ಕ್ರೀಡಾಗಳಲ್ಲಿ, ಪುರುಷರಿಗೆ ಲಗೋರಿ, ಬಾಂಬ್ ಇನ್ ದ ಸಿಟಿ, ಗೋಣಿ ಚೀಲದ ಓಟ, ಮಹಿಳೆಯರಿಗೆ, ಸಂಗೀತ ಕುರ್ಚಿ, ಬಾಂಬ್ ಇನ್ ದ ಸಿಟಿ, 20 ಮೀಟರ್ ಇಟ್ಟಿಗೆ ಓಟ, ಐದು ತಂಡದ ಗುಂಪಿನ ಆಟಗಳಾದ‌ ಪಗಡೆ ಕ್ರಿಕೆಟ್, ಬಾಲ್ ರಿಲೇ (ಪಂಚಾಯಿತಿಗೆ ಒಂದು ತಂಡದಂತೆ). ಭಾಗವಹಸಬಹುದಾಗಿದೆ.

 

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button