ಭಾರತ್ ಬೆನ್ಜ್ ಲಾರಿಯ ಟೈಯರ್ ಮತ್ತು ಡಿಸ್ಕ್ ಕಳವು

ಸುದ್ದಿಲೈವ್.ಕಾಂ/ಭದ್ರಾವತಿ
ಬಾಡಿಕಟ್ಟಿಸಲು ಗ್ಯಾರೇಜ್ ನಲ್ಲಿ ಬಿಟ್ಟಿದ್ದ ವೇಳೆ ಲಾರಿಯ 6 ಟೈಯರ್ ಮತ್ತು ಡಿಸ್ಕ್ ಗಳನ್ನ ಕಳುವು ಮಾಡಿಕೊಂಡು ಹೋಗಿದ್ದು ಇವುಗಳ ಬೆಲೆ 1 ಲಕ್ಷದ 80 ಸಾವಿರ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.
ತರೀಕೆರೆಯ ಹುರುಳಹಳ್ಳಿಯ ನಿವಾಸಿ ಮತ್ತು ಸಿರಿ ಟ್ರಾನ್ಸಪೋರ್ಟ್ ನ ಮಾಲೀಕ ರಾಘವೇಂದ್ರ ಏ.08 ರಂದು ಶಿವಮೊಗ್ಗದ ಟ್ರೇಡೆಂಟ್ ಆಟೋ ಪ್ರೈವೇಟ್ ಲಿ.,ನಲ್ಲಿ ಹೊಸ ಭಾರತ್ ಬೆನ್ಜ್ ಲಾರಿಯನ್ನ ಖರೀದಿಸಿದ್ದಾರೆ.
ಇದಕ್ಕೆ ಹಿಂಬದಿಯ ಬಾಡಿಕಟ್ಟಿಸಲು ಭದ್ರಾವತಿಯ ಭಂಡಾರಳ್ಳಿಯ ಬೈಪಾಸ್ ರಸ್ತೆಯಲ್ಲಿರುವ ಇರ್ಫಾನ್ ಎಂಬುವರ ದೋಸ್ತಿ ವೆಲ್ಡಿಂಗ್ ಬಳಿ ಬಾಡಿಕಟ್ಟಿಸಲು ಬಿಟ್ಟಿದ್ದಾರೆ. ಆದರೆ ಬಾಡಿಕಟ್ಟಿಸಲು ಹೊಣದ ಕೊರತೆ ಉಂಟಾಗಿ ಅವರ ಗ್ಯಾರೇಜ್ ನಲ್ಲಿಯೇ ಬಿಟ್ಟಿದ್ದಾರೆ.
ಇದರಿಂದಾಗಿ ಇರ್ಫಾನ್ ಸಹ ಬಾಡಿಕಟ್ಟಲು ಕೆಲಸ ಆಭಿಸಿರಲಿಲ್ಲ. ವಾರಕ್ಕೆ ಮೂರು ನಾಲ್ಕು ಬಾರಿ ರಾಘವೇಂದ್ರ ಇರ್ಫಾನ್ ಗ್ಯಾರೇಜ್ ಬಳಿ ಹೋಗಿ ವಾಹನ ನೋಡಿಕೊಂಡು ಬರುತ್ತಿದ್ದರು. ಆದರೆ ಮೊನ್ನೆ ಇರ್ಫಾರ್ ಗ್ಯಾರೇಜ್ ಬಳಿ ನಿಲ್ಲಿಸಿದ್ದ ಲಾರಿಯ ಚಕ್ರ ಮತ್ತು ಡಿಸ್ಕ್ ಗಳು ಕಾಣಿಸುತ್ತಿರಲಿಲ್ಲ.
ಇರ್ಫಾನ್ ರಾಘವೇಂದ್ರರಿಗೆ ಕರೆ ಮಾಡಿ ಲಾರಿಯ ಚಕ್ರ ಮತ್ತು ಡಿಸ್ಕ್ ಕಳ್ಳತನವಾಗಿದೆ ಗ್ಯಾರೇಜ್ ಗೆ ಬನ್ನಿ ಎಂದಿದ್ದಾರೆ. ರಾಘವೇಂದ್ರ ಬಂದು ನೋಡಿದ್ದು ಲಾರಿಯ 6 ಟೈಯರ್ ಮತ್ತು ಡಿಸ್ಕ್ ಗಳು ಇಲ್ಲದಿರುವುದು ಕಂಡು ಬಂದಿದೆ. ಇವುಗಳ ಬೆಲೆ ಸುಮಾರು1,80,000/-ರೂ. ಪತ್ತೆಯಾಗಿದೆ. ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
