ರಾಜಕೀಯ

ಸಾಧನೆಗಳೊಂದಿಗೆ ಪ್ರಧಾನಿ‌ಮೋದಿ 8 ವರ್ಷ ಸಂಪೂರ್ಣಗೊಳಿಸಿವೆ-ಗಿರೀಶ್ ಪಟೇಲ್

IMG_20220528_114506

ಸುದ್ದಿಲೈವ್.ಕಾಂ/ಶಿವಮೊಗ್ಗ

ಪ್ರಧಾನಿ ಮೋದಿ ಸರ್ಕಾರವನ್ನ ಅಪಪ್ರಚಾರ ಮಾಡಲಾಗುತ್ತಿದೆ. ವಿಪಕ್ಷಗಳು ಇದಕ್ಕೆ ಕೈಜೋಡಿಸಿವೆ ಎಂದು ಬಿಜೆಪಿಯ ವಿಭಾಗೀಯ ಪ್ರಭಾರಿ ಗಿರೀಶ್ ಪಾಟೇಲ್ ವಿಷಾಧ ವ್ಯಕ್ತಪಡಿಸಿದ್ದಾರೆ.

ಅವರು ನಗರದ ಬಿಜೆಪಿ ಪಕ್ಷದಲ್ಲಿ ಹಮ್ಮಿಕೊಳ್ಳಲಾದ ಬಿಜೆಪಿ ಜಿಲ್ಲಾ ಮಹಿಳಾ ಕಾರ್ಯಕರ್ತರ ಸಭೆಯನ್ನ ಉದ್ಘಾಟಿಸಿ ಮಾತನಾಡಿದರು. ಸತ್ಯಕ್ಕೆ ಜಯವಾಗಲಿದೆ. ಇದು ಕಾಲಕಾಲಕ್ಕೆ ಪರಿಸರವೇ ಹೇಳಿಕೊಂಡುಬಂದಿದೆ. ಪ್ರಧಾನಿ ಮೋದಿ ಕೇವಲ ಭಾರತ ದೇಶಕ್ಕೆ ನಾಯಕನಲ್ಲ ಇಡೀ ಪ್ರಪಂಚಕ್ಕೇ ನಾಯಕರಾಗಿದ್ದಾರೆ ಎಂದರು.

ಇತ್ತೀಚೆಗೆ ಜಪಾನ್ ಕ್ವಾಡ್ ರಾಷ್ಟ್ರದ ಶೃಂಗಸಭೆ ನಡೆದಿದೆ. 22 ರಾಷ್ಟ್ರಗಳು ಭಾಗಿಯಾಗಿದ್ದವು. ಒಂದು ಫೋಟೊ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮೋದಿ ಅದರಲ್ಲಿ ಮುಂದಾಳತ್ವದಲ್ಲಿ ನಡೆದುಕೊಂಡು ಬರುತ್ತಿದ್ದು ಉಳಿದ ದೇಶದ ನಾಯಕರು ಹಿಂದಿದ್ದರು. ಇದು ಒಂದು ಸಂಕೇತದ ಪೋಟೊ ಆದರೂ ಅಗಾಧವಾದ ವಿಷಯ ಹೇಳುತ್ತಿದೆ ಎಂದರು.

ಉಕ್ರೇನ್ ಮತ್ತು ರಷ್ಯ ದ ನಡುವೆ ನಡೆದ ಯುದ್ಧವನ್ನ ನಿಲ್ಲಿಸುವ ತಾಕತ್ತು ಭಾರತಕ್ಕೆ ಮಾತ್ರ ಎಂದು ಅಮೇರಿಕನೂ ಒಪ್ಪಿಕೊಂಡಿದೆ. ಪ್ರಪಂಚಕ್ಕೆ ಭಾರತ ದೇಶ ನಾಯಕತ್ವ ನೀಡುತ್ತಿದೆ. ಕೇವಲ 8 ವರ್ಷ ಮೋದಿ ಸರ್ಕಾರಕ್ಕೆ ತುಂಬುತ್ತಿಲ್ಲ ಬದಲಿಗೆ ಸಾಧನೆಯೊಂದಿಗೆ 8 ವರ್ಷ ತುಂಬಿದೆ. 376 ಯೋಜನೆಯನ್ನ 8 ವರ್ಷದಲ್ಲಿ ನೀಡಲಾಗುತ್ತಿದೆ ಎಂದರು.

ಏನೂ ಸಾಧನೆ ಮಾಡದೆ ಸರ್ಕಾರ ಅವಧಿ ಮುಗಿಸಿರುವ ಪಕ್ಷಗಳು ಇವೆ‌. ಮನಮೋಹನ್ ಸಿಂಗ್ ಸರ್ಕಾರದ ಹಗರಣದ ಮೂಲಕ ಅವಧಿ ಮುಗಿಸಿವೆ. ಕಲ್ಲಿದ್ದಲು, 2 ಜಿ ಹಗರ ಆ ಸರ್ಕಾರದ ದೊಡ್ಡ ಹಗರವಾಗಿದ್ದವು ಎಂದರು.

ಜನರಿಗೆ ಸರ್ಕಾರದ ಯೋಜನೆ ತಲುಪಿಸಬೇಕಿದೆ. ಇದರ ಮೂಲಕ ವಿಪಕ್ಷಗಳಿಗೆ ಉತ್ತರಿಸಬೇಕು. ಒಳ್ಳಯ ಸಂಗತಿ ಮತ್ತು ಸ್ವಾಭಿಮಾನಗಳನ್ನ ಎತ್ತಿಹಿಡಿಯುವ ಕೆಲಸವನ್ನ ಬಿಜೆಪಿ ಪಠ್ಯ ಪುಸ್ತಕದ ಮೂಲಕ ಹೇಳಲು ಹೊರಟಿವೆ. ಆದರೆ ವಿಪಕ್ಷಗಳು ಇದನ್ನ ಸಹಿಸಲಾರದೆ ಅಫ್ರಚಾರ ಮಾಡಿದೆ.

ಸ್ವಾಭಿಮಾನವಿಲ್ಲದೆ ಭಾರತೀಯನ ಬದುಕಿನ‌ಚಿತ್ರವನ್ನ ಹಿಂದಿನ ಪಠ್ಯ ಕ್ರಮದಲ್ಲಿ ಕಾಣುತ್ತಿದ್ದೇವೆ. ಇದ್ದವು ಅದನ್ನ ಬಿಜೆಪಿ ತೆಗೆದುಹಾಕಿವೆ. ಹೊರ ರಾಷ್ಟ್ರಗಳಿಗೆ ಹೋಗಿ ನಮ್ಮ ದೇಶದ ಬಗ್ಗೆ ಅವಮಾನೀಯವಾಗುವಂತೆ ರಾಹುಲ್ ಗಾಂಧಿ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಲ್ಪ ಸುವರ್ಣ,ಜಿಲ್ಲಾಧ್ಯಕ್ಷೆ ವಿದ್ಯಾ ಲಕ್ಷ್ಮೀಪತಿ, ಉಪಾಧ್ಯಕ್ಷೆ ಪದ್ಮಿನಿರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button