ಕ್ರೈಂ
ಕೋಳಿ ಫುಡ್ ಫ್ಯಾಕ್ಟರಿಯಲ್ಲಿ ಯಂತ್ರದ ಮೇಲೆ ಬಿದ್ದು ಕಾರ್ಮಿಕ ಸಾವು

ಸುದ್ದಿಲೈವ್.ಕಾಂ/ಭದ್ರಾವತಿ
ಕೋಳಿ ಫುಡ್ ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಹಾರ ಮಿಕ್ಸ್ ಮಾಡುವ ಮಿಷಿನ್ ನಲ್ಲಿ ಕಸ ಸಿಕ್ಕಿಕೊಂಡಿದೆ ಎಂದು ಸ್ವಚ್ಛತೆಗೆ ಮುಂದಾದ ಕಾರ್ಮಿಕ ಮಿಷಿನ್ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಲೋಯರ್ ಹುತ್ತದ ಪೆಟ್ರೋಲ್ ಪಂಪ್ ಹಿಂಭಾಗದಲ್ಲಿರುವ ಎಆರ್ ಎಸ್ ಎಂಬ ಕೋಳಿ ಫುಡ್ ತಯಾರಿಸುವ ಫ್ಯಾಕ್ಟರಿಯಲ್ಲಿ ರಾತ್ರಿ 12-30 ರ ಸಮಯದಲ್ಲಿ ಸೇಂದಿಲ್ ಕುಮಾರ್ ಎಂಬ ಕಾರ್ಮಿಕ ವಿಷನ್ ನಲ್ಲಿ ಕಸ ಕಟ್ಟಿಕೊಂಡಿದೆ ಎಂದು ತಿಳಿದು ಸ್ವಚ್ಛತೆಗೆ ಮುಂದಾಗಿದ್ದಾನೆ.
ಮಿಷಿನ್ ನಿನ ಸ್ವಿಚ್ ಆನ್ ಮಾಡಿ ಹಾರೆಯಿಂದ ತಿವಿದು ಸ್ವಚ್ಛತೆ ಮಾಡುವಾಗ ಆಯತಪ್ಪಿ ಮಿಷಿನ್ ಮೇಲೆ ಬಿದ್ದಿದ್ದಾನೆ. ಆತನ ಹೊಟ್ಟೆಯ ಭಾಗವನ್ನ ಯಂತ್ರ ಇಬ್ಭಾಗ ಮಾಡಿದೆ. ಆತ ಸಾವನ್ನಪ್ಪಿದ್ದಾನೆ.
