ಹೊಸಮನೆಯ 4 ನೇ ತಿರುವಿನಲ್ಲಿ ಯುವಕನನ್ನ ಅಡ್ಡಕಟ್ಟಿ ಥಳಿತ!

ಸುದ್ದಿಲೈವ್. ಕಾಂ/ಶಿವಮೊಗ್ಗ
ಹೊಸಮನೆಯಲ್ಲಿ ಹಳೇದ್ವೇಷದ ವಿಚಾರದಲ್ಲಿ ರಾತ್ರೋರಾತ್ರಿ ಯುವಕನನ್ನ ಅಡ್ಡಕಟ್ಟಿ ಥಳಿಸಲಾಗಿದೆ. ಆತನಿಗೆ ಲಾಂಗು ಮಚ್ಚು ತೋರಿ ಇಬ್ಬರು ಯುವಕರು ಜೀವಬೆದರಿಕೆ ಹಾಕಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮಮ್ಮ ನ ಮಗ ರಾಮಾಂಜನಿ 4 ವರ್ಷದ ಹಿಂದೆ ನಡೆದ ಪ್ರಕರಣವೊಂದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ನ್ಯಾಯಾಲಯದಲ್ಲಿ ಪ್ರಕರಣ ಇತ್ಯಾರ್ಥಗೊಳ್ಳುವ ಮೊದಲೇ ರಾಜೀ ಮಾಡಿಕೊಳ್ಳುವಂತೆ ಒತ್ತಡ ಹಾಕಲಾಗಿದೆ.
ಪರಶುರಾಮ್ ಮತ್ತು ನವೀನ್ ಎಂಬುವರ ಸಂಬಂಧಿಕರ ನಡುವೆ ಇದ್ದ ವೈರುದ್ಧವನ್ನ ರಾಜೀ ಮೂಲಕ ಇತ್ಯರ್ಥ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿತ್ತು. ಆದರೆ ನಿನ್ನೆ ರಾತ್ರಿ 12-30 ರ ವೇಳೆ ರಾಮಾಂಜನಿ ಹೊಸಮನೆ 4 ತಿರುವಿನ ಬಳಿ ಬರುತ್ತಿದ್ದ ಹಾಗೆ ಹಲ್ಲೆ ನಡೆದಿದೆ.
ಹೊಸಮನೆಯ ಮೂರನೇ ತಿರುವಿಗೆ ಹೋಗುವ ವೇಳೆ ಇದೇ ಪರಶುರಾಮ್ ಮತ್ತು ನವೀನ್ ರಾಮಾಂಜನಿಯನ್ನ ಅಡ್ಡಕಟ್ಟಿ ಥಳಿಸಿದ್ದಾರೆ ಎಂದು ರಾ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೋರಾಗಿ ಕೂಗಿದ ಪರಿಣಾಮ ನೆರೆಹೊರೆಯ ಮನೆಯವರು ಹೊರಗೆ ಬಂದಿದ್ದಾರೆ.
ಇವರನ್ನ ನೋಡಿದ ಪರಶುರಾಮ್ ಮತ್ತು ನವೀನ್ ಮಚ್ಚು ತೋರಿಸಿ ಜೀವತೆಗೆಯುವುದಾಗಿ ಬೆದರಿಸಿ ಪರಾರಿಯಾಗಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
