ಮನೋರಂಜನೆ

ಸನಾತನ ಸಂಸ್ಕೃತಿಯಲ್ಲಿ ಮಾತ್ರ ಧರ್ಮ ಕಾಣಲು ಸಾಧ್ಯ-ಪೇಜಾವರಶ್ರೀಗಳು

ಸುದ್ದಿಲೈವ್.ಕಾಂ/ಶಿವಮೊಗ್ಗ

ದುಖಕ್ಕೆ ಹಲವು ಕಾರಣಗಳಿದ್ದರೆ, ಸುಖಕ್ಕೆ ಕಾರಣಗಳು ಕಡಿಮೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮಿಗಳು ತಿಳಿಸಿದ್ದಾರೆ‌

ಅವರು ನಿನ್ನೆ ಕುವೆಂಪು ರಂಗಮಂದಿರದಲ್ಲಿ ಶ್ರೀಗಂಧ ಸಂಸ್ಥೆಯಿಂದ ಹಮ್ಮಿಕೊಳ್ಳಲಾದ  ಶ್ರೀ ಶ್ರೀನಿವಾಸ ಕಲ್ಯಾಣ ಕುರಿತು ವಿಶೇಷ ಉಪನ್ಯಾಸ, ಅಭಿನಂದನಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸುಖ, ನೆಮ್ಮದಿಗೆ ಜೀವನದಲ್ಲಿ ಧರ್ಮದ ಮಾರ್ಗದಲ್ಲಿ ನಡೆಯಬೇಕು.ನೆಮ್ಮದಿ ಜೀವನ ನಡೆಸುವುದು ಎಲ್ಲರ ಕನಸಾಗಿರುತ್ತದೆ. ಆದರೆ ಇನ್ನೊಬ್ಬರ ಬದುಕನ್ನ ಕಸಿದುಕೊಂಡು ಸುಖದ ಬದುಕಿನ ಕನಸು ಕಾಣುವುದು ಸರಿಯಲ್ಲವೆಂದರು.

ಒಬ್ಬರ ಸುಖಕ್ಕಾಗಿ ಇನ್ನೊಬ್ಬರಿಗೆ ದುಖಃ ಕೊಡಬಾರದು.
ಪರರಿಗೆ ನೋವು ಅಥವಾ ಕೆಡಕುಂಟು ಮಾಡಬಾರದು.
ಕೆಡಕು ಮಾಡಿದರೆ ಆ ಸಮಾಜ ಉದ್ಧಾರ ಆಗಲ್ಲ
ದುಖಃಕ್ಕೆ ಹಲವು ಕಾರಣಗಳಿದ್ದರೆ, ಸುಖಕ್ಕೆ ಕಾರಣಗಳು ತುಂಬಾ ಕಡಿಮೆ ಎಂದು ಶ್ರೀಗಳು ತಿಳಿಸಿದರು.

ಸಮಾಜಕ್ಕೆ ಧಾರ್ಮಿಕ ಮಾರ್ಗದರ್ಶನ ಅತ್ಯಗತ್ಯ.
ಸನಾತನ ಸಂಸ್ಕೃತಿಯಲ್ಲಿ ಮಾತ್ರ ಧರ್ಮವನ್ನು ಕಾಣಲು ಸಾಧ್ಯವಿದೆ ಎಂದರು.

ವಾಗ್ಮಿ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಶ್ರೀನಿವಾಸ ಕಲ್ಯಾಣ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಾಸಕ ಕೆ.ಎಸ್.ಈಶ್ವರಪ್ಪ, ಪತ್ನಿ ಜಯಲಕ್ಷ್ಮಿ, ಜಯಶ್ರೀ ಮತ್ತಿತರರು ಇದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button