
ಸುದ್ದಿಲೈವ್. ಕಾಂ/ಶಿವಮೊಗ್ಗ
ಹಿಂಬದಿಯ ವಾಹನಕ್ಕೆ ದಾರಿ ನೀಡದೆ ಇರುವ ಕಾರಣದಿಂದಾಗಿ ಮೂವರು ಯುವಕರು ಟ್ರ್ಯಾಕ್ಟರ್ ಚಲಾಯಿಸುವನ ಗುತ್ತಿಗೆದಾರನ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿತೆ ಮೂರನ್ನ ಬಂಧಿಸಲಾಗಿದೆ.
ನಗರದ ರಾಗಿಗುಡ್ಡದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಈ ರಸ್ತೆ ಕಾಮಗಾರಿಯಲ್ಲಿ ಮಣ್ಣು ಎತ್ತಿಹಾಕುವ ಕಂಟ್ರ್ಯಾಕ್ಟ್ ನ್ನ ಮಾಡುತ್ತಿದ್ದ ಯತೀಶ್ ಎಂಬಾತನು ಕಾಮಗಾರಿಯ ಮಣ್ಣನ್ನ ಕೆರೆಯ ಬದಿ ಹಾಕುತ್ತಿದ್ದಾಗ ಹಿಂಬದಿಯಿಂದ 5-6 ಜನ ಯುವಕರು 2 ದ್ವಿಚಕ್ರ ವಾಹನಗಳಲ್ಲಿ ಬಂದಿದ್ದಾರೆ.
ಬಂದು ಟ್ರ್ಯಾಕ್ಟರ್ ಗೆ ಅಡ್ಡಹಾಕಿ ಅವ್ಯಾಚ್ಯ ಶಬ್ದಗಳಿಂದ ಬೈದು ಟ್ಯಾಕ್ಟರ್ನ ಇಗ್ನೀಷನ್ ಕೀಯಿಂದ ಟ್ರ್ಯಾಕ್ಟರ್ ನ್ನ ಬಂದ್ ಮಾಡಿ ಯತೀಶ್ ನ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆ. ಮೂವರು ಹುಡುಗರು ಚಾಕು ಬುರ್ಜಿ ಏನಾದರು ಇದ್ದರೆ ಕೊಡಿ ಸಾಯಿಸಿಬಿಡೋ ಎಂದು ಹೇಳಿದ್ದಾರೆ.
ಚಾಕು ಬುರ್ಜಿ ಸಿಗದ ಕಾರಣ ಇವರಲ್ಲಿ ಒಬ್ಬ ಸೈಜ್ ಗಲ್ಲು ತಂದು ಮುಖಕ್ಕೆ ಎತ್ತಿಹಾಕಲು ನೋಡಿದ್ದಾನೆ. ಅಷ್ಟರೊಳಗೆ ಸುನೀಲ್ ಮತ್ತು ಗಣೇಶ್ ಎಂಬುವರು ಜಗಳ ಬಿಡಿಸಲು ಬಂದಿದ್ದಾರೆ. ಅವರನ್ನೂ ಹೊಡೆದು ಕಳುಹಿಸಿದ್ದಾರೆ.
ನಂತರ ಸಾರ್ವಜನಿಕರು ಜಗಳ ಜಾಗದಲ್ಲಿ ಸೇರಲು ಪ್ರಾರಂಭಿಸಿದ್ದರ ಕಾರಣ ಇವರು ಜಾಗಖಾಲಿ ಮಾಡಿದ್ದಾರೆ. ನಿಧಾನವಾಗಿ ಹೋಗುವಾಗ ಇವತ್ತು ಉಳಿದುಕೊಂಡಿದ್ದೀರ ಮತ್ತೊಮ್ಮೆ ಸಿಕ್ಕರೆಜೀವ ತೆಗೆದೇ ಹೋಗ್ತೀವಿ ಎಂದು ಧಮ್ಕಿ ನೀಡಿದ್ದಾರೆ.
ಇದರಲ್ಲಿ ಯತೀಶ್ ಗೆ ಧಮ್ಕಿ ಹಾಕಿ ಜೀವತೆಗೆಯಲು ಯತ್ನಿಸಿದ ಮತ್ತು ಜೀವ ಬೆದರಿಕೆಹಾಕಿದ ಐದಾರು ಜನರಲ್ಲಿ ಸಲ್ಮಾನ್, ಶಾಮೀರ್,ಮೊಹ್ಮದ್ ಎಂದು ಗುರುತಿಸಲಾಗಿದೆ. ಈ ಮೂವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೂವರನ್ನ ಪೊಲೀಸರು ಬಂಧಿಸಲಾಗಿದೆ.
