ಶಾಲಾ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ-ಬೈಕ್ ಹಿಂಬದಿಯ ಮಹಿಳಾ ಸವಾರರು ಸಾವು

ಸುದ್ದಿಲೈವ್.ಕಾಂ/ಶಿಕಾರಿಪುರ
ಶಾಲಾ ವಾಹನವೊಂದು ದಿಡೀರನೇ ತಿರುವು ತೆಗೆದುಕೊಂಡ ಪರಿಣಾಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಪೊಲೀಸ್ ಸಿಬ್ಬಂದಿ ಡಿಕ್ಕಿ ಹೊಡೆದು ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಅವರ ತಾಯಿ ಸಾವನ್ನಪ್ಪಿದ್ದಾರೆ
ತಿಮ್ಲಾಪುರ ತಿರುವಿನ ಬಳಿ ಎಡಬದಿ ಹೋಗುತ್ತಿದ್ದ ಶಾಲಾ ವಾಹನ ತಿಮ್ಲಾಪುರ ತಿರುವಿನ ಬಳಿ ಬಲಭಾಗ ತಿರುಗಿದ ಕಾರಣ ಹಿಂಬದಿಯಿಂದ ಪಲ್ಸರ್ ಬೈಕ್ ನಿಂದ ಬರುತ್ತಿದ್ದ ಸವಾರ ಡಿಕ್ಕಿ ಹೊಡೆದಿದ್ದಾರೆ.
ಹಿಂಬದಿ ಕುಳಿತಿದ್ದ ಪುಷ್ಪ ಎಂಬುವರಿಗೆ ತಲೆಗೆ ತೀವ್ರವಾಗಿ ಹೊಡೆತಬಿದ್ದಿದೆ. ಶಿಕಾರಿಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ನಂತರ ಮೆಗ್ಗಾನ್ ಗೆ ಕರೆದುಕೊಂಡು ಬರಲಾಗಿದೆ. ಈ ವೇಳೆ ಪುಷ್ಪ ಕೊನೆ ಉಸಿರು ಎಳೆದಿದ್ದಾರೆ.
ಶಿವಮೊಗ್ಗದ ಮಲವಗೊಪ್ಪದಲ್ಲಿರುವ ಜೈಲಿನಲ್ಲಿ ಪೊಲೀಸ್ ಆಗಿರುವ ಜಗದೀಶ್ ಎಂಬುವರು ನಿನ್ನೆ ಶಿವಮೊಗ್ಗದಿಂದ ಸೊರಬಕ್ಕೆ ಹೊರಟಿದ್ದಾರೆ. ಪಲ್ಸರ್ ಬೈಕ್ ನಲ್ಲಿ ತಾಯಿ ಪುಷ್ಪರನ್ನ ಕೂರಿಸಿಕೊಂಡು ಸೊರಬದ ದುಗ್ಲಿಹೊಸೂರಿಗೆ ಹೋಗುತ್ತಿರುವ ವೇಳೆಯಲ್ಲಿ ಈ ಘಟನೆ ನಡೆದಿದೆ. ಜಗದೀಶ್ ಗೆ ಎಡಗಾಲು ಮುರಿದಿದೆ.
