ಸಿದ್ದರಾಮಯ್ಯ ಆರ್ ಎಸ್ ಎಸ್ ಮತ್ತು ಪ್ರಧಾನಿ ಮೋದಿಯ ಕ್ಷಮೆ ಕೇಳಬೇಕು-ಈಶ್ವರಪ್ಪ

ಸುದ್ದಿಲೈವ್.ಕಾಂ/ಶಿವಮೊಗ್ಗ
ಸಿದ್ದರಾಮಯ್ಯನವರು ಪ್ರಧಾನಿ ಮೋದಿ ಮತ್ತು ಆರ್ ಎಸ್ ಎಸ್ ವಿರುದ್ಧ ಮಾತನಾಡಿರುವುದನ್ನ ಸಚಿವ ಈಶ್ವರಪ್ಪ ಕಠೋರವಾಗಿ ಖಂಡಿಸಿದ್ದು ಸಿದ್ದರಾಮಯ್ಯ ಇಬ್ವರ ಕ್ಷಮೆಕೇಳಬೇಕೆಂದು ಆಗ್ರಹಿಸಿದ್ದಾರೆ.
ಅವರು ಸ್ವಗೃಹದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿದ್ದರಾಮಯ್ಯ ಎಚ್ಚರತಪ್ಪಿ ಆರ್ ಎಸ್ ಎಸ್ ಬಗ್ಗೆ ಮತ್ತು ಪ್ರಧಾನಿ ಮೋದಿ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಹಾಗಾಗಿ ಪ್ರಧಾನಿ ಮೋದಿ ಮತ್ತು ಆರ್ ಎಸ್ ಎಸ್ ಬಗ್ಗೆ ಕ್ಷಮೆಕೇಳಬೇಕೆಂದು
ಪ್ರಧಾನಿ ಮೋದಿ ಯಾವಲೆಕ್ಕ, ನೆಹರೂ ಜೊತೆ ಹೋಲಿಕೆ ಮಾಡಿ ಆಕಾಶ ಮತ್ತು ಭೂಮಿಗೆ ಹೋಲಿಕೆ ಮಾಡಿದ್ದಾರೆ. ನೆಹರೂ ಕಾಲದಲ್ಲಿ ಪಾಕಿಸ್ತಾನ ಬಿಟ್ಟು ಪ್ರಪಂಚದ ಎಲ್ಲಾರಾಷ್ಟ್ರಗಳು ಭಾರತವನ್ನ ವಿರೋಧಿಸುತ್ತಿದ್ದವು. ಆದರೆ ಮೋದಿ ಪ್ರಧಾನಿ ಆದ ನಂತರ ಎಲ್ಲಾ ರಾಷ್ಟ್ರಗಳು ಪಾಕ್ ನ್ನ ವಿರೋಧಿಸುತ್ತಿವೆ. ಎಲ್ಲರಿಗೂ ಪಾಕ್ ಇಂದು ಭಯೋತ್ಪಾದಕ ರಾಷ್ಟ ಎಂದು ತೋರಿಸಿಕೊಟ್ಟಿದ್ದು ಪ್ರಧಾನಿ ಮೋದಿ ಎಂದು ಶ್ಲಾಘಿಸಿದರು.
ನೆಹರೂನ ಮೋದಿಯೊಂದಿಗೆ ಹೋಲಿಸಲು ಸಾಧ್ಯವಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದಾರೆ. ನೆಹರೂ ಅವರ ಕಾಲದಲ್ಲಿ ಭಾರತ ಇಬ್ಭಾಗವಾಗಿತ್ತು. ಕಾಶ್ಮೀರವೂ ಕೂಡ ಭಾರತದ ಭೂಭಾಗವೆಂದು ಹೇಳಿದ ಕೀರ್ತಿ ಮೋದಿಗೆಸಲ್ಲಿಕೆಯಾಗಿದೆ. ಇದು ಭೂಮಿ ಮತ್ತು ಆಕಾಶದ ವ್ಯತ್ಯಾಸ ಎಂದು ಸ್ಒಷ್ಟನೆ ನೀಡಿದರು.
ಮತ್ತೊಂದು ಗಂಬೀರ ಆರೋಪ ಮಾಡಿರುವ ಸಿದ್ದರಾಮಯ್ಯ ಆರ್ ಎಸ್ ಎಸ್ ನವರು ದೇಶದವರಲ್ಲ ಎಂದಿದ್ದಾರೆ. ಸಿದ್ದರಾಮಯ್ಯನೇ ಅಲೆಮಾರಿ, ಇವರಿಗೆ ಆರ್ಎಸ್ ಎಸ್ ನ ಕಲ್ಪನೇನೇ ಇಲ್ಲ. ಆರ್ ಎಸ್ ಏಸ್ ಈ ದೇಶವನ್ನ ಉಳಿಸಿದ ಸಂಘಟನೆ. ಇದು ಪಕ್ಜಾ ಭಾರತದ ಮಣ್ಣಿನಿಂದ ಹುಟ್ಟಿದ ಸಂಘಟನೆ ಎಂದರು.
ಕಾಂಗ್ರೆಸ್ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಇಂದಿರಾಗಾಂಧಿಯ ಯಜಮಾನ ಮತ್ತು ಸೋನಿಯಾ ಗಾಂಧಿ ಯಾರು ಎಂದು ಪ್ರಶ್ನಿಸಿ ಟಾಂಗು ನೀಡಿದ ಮಾಜಿ ಸಚಿವರು ಇಟಲಿಯಿಂದ ಕಾಂಗ್ರೆಸ್ ನಿಯಂತ್ರಣವಾಗುತ್ತಿದೆ ಎಂದರು.
ಜೆಡಿಎಸ್, ಸಮಾಜವಾದದ ಹಿನ್ಬಲೆಯಲ್ಲಿ ಬಂದ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಎನ್ನುತ್ತಿದ್ದಾರೆ. ಎಲ್ಲಿ ಅಧಿಕಾರ ಸಿಗುತ್ತೆ ಅಲ್ಲಿ ಸಿದ್ದರಾಮಯ್ಯ ಇರ್ತಾರೆ. ಇವರು ಆರ್ ಎಸ್ ಎಸ್ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದರು.
ಆರ್ ಎಸ್ ಎಸ್ ವಿದೇಶಿಯ ವ್ಯಕ್ತಿಗಳ ಸೆರಗು ಹಿಡಿದುಕೊಂಡು ಓಡಾಡುತ್ತಿಲ್ಲ. ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ಸ್ವಾತಂತ್ರ ಪೂರ್ವದಿಂದ ಆರ್ ಎಸ್ ಎಸ್ ದೊಡ್ಡ ಸಂಘಟನೆ. ಭಾರತದ ಕೀರ್ತಿ ಪತಾಕೆಯನ್ನ ಎತ್ತಿಹಿಡಿಯುತ್ತಿರುವುದು ಆರ್ ಎಸ್ ಎಸ್ಎಂದರು.
ಚಾಮುಂಡಿ ಸೀತರೆ ಬಾದಾಮಿ ನಂತರ ಜಮೀರು ಕ್ಷೇತ್ರಕ್ಕೆ ಹೋಗಿ ಮುಂದಿನ ಚುನಾವಣೆ ಸ್ಪರ್ಧಿಸುವ ಸಿದ್ದರಾಮಯ್ಯ ಜಿಜಾಬ್ ಸಮಸ್ಯೆಯ ವೇಳೆ ಧರ್ಮಕ್ಕೆ ಬೆಲೆಕೊಡುವವರಿಗೆ ವೆಂಬಲಿಸಿದವರು. ಶಾಂತಿಯಿಂದ ಬಂದ್ ಮಾಡಿತಪ್ಪೇನಿದೆಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಯಮುಂದೆ ಗಲಭೆ ಸೃಷ್ಠಿಸುವ ಬಗ್ಗೆ ಬೆಂಬಲಿಸಿದವರು ಸಿದ್ದರಾಮಯ್ಯ. ನಾನು ಉತ್ತರ ಕೊಡಬಾರದುಎಂದಿದ್ದೆ. ಆದರೆ ಜನರಿಗೆ ಗೊತ್ತಾಗಬೇಕು. ಸಿದ್ದರಾಮಯ್ಯ ಆರ್ ಎಸ್ ಎಸ್ ಮತ್ತು ಪ್ರಧಾನಿ ಮೋದಿ ಬಗ್ಗೆ ಮಾತನಾಡುವುದನ್ನ ಜನರಿಗೆ ತಿಳಿಯಬೇಕೆಂಬ ದೃಷ್ಠಿಯಿಂದ ಮಾತನಾಡುತ್ತಿದ್ದೇನೆ ಎಂದರು. ಪ್ರಧಾನಿ ಮೋದಿ ಮತ್ತು ಆರ್ ಎಸ್ ಎಸ್ ಅವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಶೈಕ್ಷಣಿಕ ಪಠ್ಯ ಪುಸ್ತಕದ ಬಗ್ಗೆ ಚರ್ಚೆ ಆಗುತ್ತಿದೆ. ಸಾಹಿತಿಗಳು ಪ್ರತಿಭಟನೆಗೆ ಯಾವ ಬರಹಗಾರರನ್ನ ಟೀಕಿಸೊಲ್ಲ. ಬರಗೂರು ರಾಮಚಂದ್ರಪ್ಪನವರು ಸಮಿತಿ ಅಧ್ಯಕ್ಷರಾಗಿದ್ದಾಗ, ಟಿಪ್ಪು ಸುಲ್ತಾನ್ ನನ್ನ ಗ್ರೇಟ್ ಅಂದರು. ಇವರೆಲ್ಲಾ ವಿದೇಶಿ ವ್ಯಕ್ತಿಗಳನ್ನ ಅರಾಧಿಸಲಾಗುತ್ತಿತ್ತು. ಭಗತ್ ಸಿಙಗ್ ಮತ್ತು ನಾರಾಯಣ ಗುರು ತೆಗೆಯಲಾಗಿತ್ತು ಎಂದು ಗುಲ್ಲೆಬ್ವಿಸಲಾಗಿತ್ತು. ತೆಗೆದಿಲ್ಲ.
ಅನೇಕ ವಿಚಾರಗಳು ಹೊರಗೆ ಬರ್ತಾ ಇದೆ. ರಾಷ್ಟ್ರಭಕ್ತಿ ವಿಚಾರ ಹೊರಗೆ ಬರ್ತಾ ಇದೆ. ರಾಣಿ ವಂಶಸ್ಥರಾಗಿದ್ದ ಎಂಪಿಯವರು ತಾಜ್ ಮಹಲ್ ಜಾಗ ದೇವಸ್ಥಾನದ ಜಾಗ ಎಂದು ಹೇಳಿದ್ದರು.
