ಸಾಗರ ಮತ್ತು ಹೊಸನಗರ ಎಪಿಎಂಸಿ ವಿಲೀನತೆ ಇಲ್ಲ-ಶಾಸಕ ಹರತಾಳು ಹಾಲಪ್ಪ ಸ್ಪಷ್ಟನೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ಸಾಗರ ಮತ್ತು ಹೊಸನಗರ ಎಪಿಎಂಸಿ ವಿಲೀನ ಮಾಡಬಾರದು ಎಂದು ಸಾರ್ವಜನಿಕರ ಅಭಿಪ್ರಾಯಕ್ಕೆ ಸರ್ಕಾರ ಮಣಿದಿದೆ. ಈ ಹಿನ್ನಲೆಯಲ್ಲಿ ಎರಡು ಎಪಿಎಂಸಿ ಸೇರ್ಪಡೆಯನ್ನ ಕೈಬಿಡಲಾಗಿದೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ತಿಳಿಸಿದರು.
ಅವರು ಬಿಜೆಪಿ ಪಕ್ಷದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸರ್ಕಾರದೊಂದಿಗೆ ಮಾತನಾಡಿದ್ದೇನೆ ಹಳೆಯ ರೀತಿಯಲ್ಲಿ ಎಪಿಎಂಸಿ ಗಳು ಒಟ್ಟಿಗೆ ನಡೆಯಲಿದೆ ಎಂದು ಸೂಚಿಸಲಾಗಿತ್ತು. ಆದರೆ ಸರ್ಕಾರ ಈ ಪ್ರಸ್ತಾವನೆಯನ್ನ ಕೈಬಿಟ್ಟಿದ್ದಾರೆ ಎಂದರು.
ಎಪಿಎಂಸಿ ಸೆಸ್ ಕಡಿಮೆ ಆಗಿದೆ. ಜೊತೆಗೆ ಬೇರೆಬೇರೆ ಕಾರಣಕ್ಕೆ ಒಂದಾಗಿಸಲು ಸರ್ಕಾರ ಮುಂದು ಆಗಿತ್ತು. ನಮ್ಮ ಗಮನಕ್ಕೂ ಬಂದಿರಲಿಲ್ಲ. ನೋಟಿಫಿಕೇಷನ್ ಮಾಡಿ ಆಕ್ಷೇಪಣೆಗೆ ಆಹ್ವಾನಿಸಲಾಗಿತ್ತು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ. ಜನಾಭಿಪ್ರಾಯಣಕ್ಕೆ ಮನ್ನಣೆ ಮಾಡಲಾಗಿದೆ ಎಙದರು.
ಹೊಸನಗರದ ಬೈಪಾಸ್ ಸಂಸದ ಮತ್ತು ಅಧಿಕಾರಿಗಳ ಜೊತೆ ನಾನು ಮಾತನಾಡಿದ್ದೇನೆ. ಬೈಪಾಸ್ ನ್ನ ಊರ ಹೊರಗೆ ಬೇಡ ಎಂಬುದು ಎಲ್ಲರ ಅಭಿಪ್ರಾಯ ಆದರೆ ರಾಷ್ಟ್ರೀಯ ಹೆದ್ದಾರಿಯ ನಿಯಮಗಳಿವೆ. ಊರಿನ ಒಳಗೆ ಬೈಪಾಸ್ ಆದರೆ ಊರನ್ನ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡಬೇಕು.
ಇದರಲ್ಲಿ ಕೆಲವರು ನ್ಯಾಯಾಲಯದ ಕದತಟ್ಟೇ ತಟ್ಟುತ್ತಾರೆ. ಅಭಿವೃದ್ಧಿ ಕಾರ್ಯ 10 ವರ್ಷ ಸ್ಥಗಿತಗೊಳ್ಳುತ್ತದೆ. ಹಾಗಾಗಿ ಊರಿನ ಹೊರಗೆ ಬೈಪಾಸ್ ಮಾಡಲು ಅಧಿಕಾರಿಗಳು ಮನವೊಲಿದ್ದಾರೆ. ಆದರೂ ಹೊಸನಗರ ಜನರೊಂದಿಗೆ ನಾನು ಮಾತನಾಡುವೆ. ರಾಷ್ಟ್ರೀಯ ಹೆದ್ದಾರಿಯವರ ಟರ್ಸ್ ಅಂಡ್ ಕಂಡಿಷನ್, ಪರಿಹಾರಕ್ಕೆ ಒಪ್ಪಿದ್ದಲ್ಲಿ ಊರಿನ ಒಳಗೆ ಹೆದ್ದಾರಿ ರಚನೆ ಮಾಡುವ ಬಗ್ಗೆ ಚಿಂತಿಸಲಾಗುವುದು ಎಂದರು.
ಹೊಸನಗರ ವಿಧಾನ ಸಭೆ ಕ್ಷೇತ್ರಕ್ಕೆ ಜನಸಂಖ್ಯೆ ಕಡಿಮೆ ಮಾಡಿದರೆ ಕ್ಷೇತ್ರ ಮರುವಿಂಗಡಣೆ ಆಗಲಿದೆ. ನೆಟ್ ವರ್ಕ್ ಸಮಸ್ಯೆ ಮೂಲಬೂತ ಸಮಸ್ಯೆಯಾಗಿದೆ ಪರಿಹರಿಸಲು ಶ್ರಮಿಸಲಾಗುತ್ತದೆ. ಮಂಕಿಪಾರ್ಕ್ ಗೆ ಐದು ಎಕರೆ ಜಾಗಕ್ಕೆ ಸಿಗಂದೂರು ಭಾಗದಲ್ಲಿ ಜಾಗ ಗುರುತಿಸಲಾಗಿತ್ತು. ಆದರೆ ಅಲ್ಲಿ ಅವುಗಳಿಗೆ ಆಹಾರ ಸರಬರಾಜು ಮಾಡುವುದೇ ಕಷ್ಟವಾಗಿದೆ.
ಮಂಕಿ ಪಾರ್ಕ್ ನ್ನ ಲಯನ್ ಸಫಾರಿಯಲ್ಲಿ ಮಾಡಲು ಸಲಹೆ ಮಾಡಿದ್ದೆ. 100 ಎಕರೆ ಜಾಗದಲ್ಲಿ ಟ್ರಯಲ್ ಆಗಿ ಮಾಡುವಂತೆ ಸಲಹೆ ನೀಡಿದ್ದೇನೆ. ಕಾದು ನೋಡೋಣ ಎಂದರು.
ಕೆಎಫ್ ಡಿ ಲ್ಯಾಬ್ ನಿರ್ಮಿಸಲು ಸಾಗರದಲ್ಲಿಯೇ ಜಾಗ ನೋಡಲಾಗಿತ್ತು. ಜಾಗ ತೋರಿಸಿದರೆ. ಅಧಿಕಾರಿಗಳು ಕೇಳ್ತಾ ಇಲ್ಲ. ಲ್ಯಾಬ್ ಗೆ ವಿಜ್ಞಾನಿಗಳು ಬರುತ್ತಾರೆ ಎನ್ನುತ್ತಾರೆ. ಹಾಗಾಗಿ ಶಿವಮೊಗ್ಗದಲ್ಲಿಯೇ ಕೆಎಫ ಡಿ ಲ್ಯಾಬ್ ತರಲಾಗುತ್ತಿದೆ ಎನ್ನುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಮಾಧ್ಯಮ ಸಂಚಾಲಕ ಅಣ್ಣಪ್ಪ ಉಪಸ್ಥಿತರಿದ್ದರು.
